ಎಚ್ಎಎಲ್ ಮತ್ತು ಸಾಬ್ ನಡುವೆ ಒಪ್ಪಂದ

7

ಎಚ್ಎಎಲ್ ಮತ್ತು ಸಾಬ್ ನಡುವೆ ಒಪ್ಪಂದ

Published:
Updated:

 ಬೆಂಗಳೂರು (ಐಎಎನ್‌ಎಸ್): ಭಾರತದ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ನ ಸಹಯೋಗದಲ್ಲಿ ಯುದ್ಧ ವಿಮಾನ ಹಾಗೂ ಹೆಲಿಕಾಫ್ಟರ್ ಗಳಲ್ಲಿ ಅಳವಡಿಸಿ ಬಳಸಬಹುದಾದ ಎಲೆಕ್ಟ್ರಾನಿಕ್ ಆಯುಧ ಗುಚ್ಛಗಳ ತಯಾರಿಕೆಗಾಗಿ ಜಂಟಿ ಯೋಜನೆಯೊಂದನ್ನು ರೂಪಿಸಲಾಗಿದೆ ಎಂದು ಸ್ವಿಡನ್ ನ ಯುದ್ಧ ಸಾಮಗ್ರಿ ತಯಾರಿಕೆ ಮತ್ತು ಮಾರಾಟ ಸಂಸ್ಥೆ ~ಸಾಬ’ ಬುಧವಾರ ಇಲ್ಲಿ ಪ್ರಕಟಿಸಿದೆ.

  ಬುಧವಾರ ಇಲ್ಲಿ ವಿಷಯ ತಿಳಿಸಿದ ಭಾರತದಲ್ಲಿನ ~ಸಾಬ್~  ಶಾಖೆಯ ಮುಖ್ಯಸ್ಥ  ಇಂದ್ರಜಿತ್ ಸಿಯಾಲ್ ಅವರು, ಪ್ರಸ್ತುತ ಜಂಟಿ ಯೋಜನೆಯಲ್ಲಿ ಪ್ರಾಥಮಿಕವಾಗಿ ಈ ಎಲೆಕ್ಟ್ರಾನಿಕ್ ಆಯುಧ ಗುಚ್ಛಗಳನ್ನು ಸೇನೆಯ ಹೆಲಿಕಾಪ್ಟರ್ ಗಳಲ್ಲಿ ಮತ್ತು  ಫೈಟರ್ ಜೆಟ್ ಗಳಲ್ಲಿ ಬಳಸಬಹುದು ಎಂದಿದ್ದಾರೆ.

ಸದ್ಯಕ್ಕೆ ಈ ಎಲೆಕ್ಟ್ರಾನಿಕ್ ಆಯುಧ ಗುಚ್ಛಗಳನ್ನು ಮಲೇಶಿಯಾದವರು ತಮ್ಮ  ಉತ್ಕೃಷ್ಟವಾದ  ಯುದ್ಧ ವಿಮಾನ ~ಸೂ-3ಎಂಕೆಕೆ~ಗಳಲ್ಲಿ ಬಳಸುತ್ತಿದ್ದಾರೆ.

ಈ ಜಂಟಿ ಯೋಜನೆಗೆ ~ಸಾಬ್~ ಮತ್ತು ~ಎಚ್ಎಎಲ್~ ಆಡಳಿತ ಮಂಡಳಿಗಳು ತಾತ್ವಿಕವಾಗಿ ಒಪ್ಪಿಗೆ ನೀಡಿವೆ. ಈ ಜಂಟಿ ಯೋಜನೆ ಕಾರ್ಯರೂಪಕ್ಕೆ ಬರುವಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

ಏಚ್ಎಎಲ್ ಗೆ ಪೂರಕವಾಗಿ ಸಾಬ್ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನದೇ ಆದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವಲ್ಲಿ ಉತ್ಸಕವಾಗಿದೆ  ಎಂದೂ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry