ಬುಧವಾರ, ಮೇ 18, 2022
23 °C

ಎಚ್.ಕೆ.ಪಾಟೀಲರೊಂದಿಗೆ ಸಮನ್ವಯ ಸಮಿತಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶದ 371ನೇ ಕಲಂ ಅನುಷ್ಠಾನದ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಅವರನ್ನು ಹೈದರಾಬಾದ್ ಕರ್ನಾಟಕ ಹೋರಾಟಗಳ ಸಮನ್ವಯ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿಯವರ ನೇತೃತ್ವದ ನಿಯೋಗ ಈಚೆಗೆ ಬೆಂಗಳೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿತು.ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಜಿಲ್ಲೆಗಳ ಕನ್ನಡ ಪರ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ, ರೈತ ಕಾರ್ಮಿಕ, ವಿದ್ಯಾರ್ಥಿ ಯುವಕ ಸಂಘಟನೆ ಸದಸ್ಯರು ನಿಯೋಗದಲ್ಲಿದ್ದರು.ಮೂಲ ಹೈದರಾಬಾದ್ ಕರ್ನಾಟಕದವರನ್ನು ಗುರುತಿಸಿ ಶಿಕ್ಷಣ ಮತ್ತು ನೇಮಕಾತಿಗಳಲ್ಲಿ ಮೀಸಲಾತಿ ನೀಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕು. ವೃತಿಪರ ಮತ್ತು ಸಂಶೋಧನಾ ಕೋರ್ಸ್‌ಗಳಲ್ಲಿ ಶೇ 98 ರಷ್ಟು ಮೀಸಲಾತಿ ಒದಗಿಸಬೇಕು.ಸ್ವಾಯತ್ತ ಅಭಿವೃದ್ಧಿ ಮಂಡಳಿ ರಚಿಸಿ ಹೈ.ಕ. ಪ್ರದೇಶದ ಎಲ್ಲಾ ಕ್ಷೇತ್ರಗಳ ರಚನಾತ್ಮಕ ಪ್ರಗತಿಗೆ ಕ್ರಮ ಕೈಗೊಳ್ಳವುದು ಮತ್ತು ಮಂಡಳಿಗೆ ಹೈ.ಕ ಪ್ರದೇಶದ ತಜ್ಞರು ಮತ್ತು ಹೋರಾಟಗಾರರನ್ನು ಸದಸ್ಯರನ್ನಾಗಿ ನೇಮಿಸಬೇಕು. ಮರು ನಿಯಮ ರೂಪಿಸುವಂತೆ ಅವಕಾಶ ಕಲ್ಪಿಸಬೇಕು. ಪ್ರತಿ ಮೂರು ವರ್ಷಕ್ಕೆ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುವುದು ಸೇರಿದಂತೆ 39 ಅಂಶಗಳ ಬಗ್ಗೆ ಚರ್ಚಿಸಲಾಯಿತು.ಹೈ.ಕ. ಭಾಗದ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿರುವುದಾಗಿ ಎಚ್. ಕೆ.ಪಾಟೀಲ್ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಸಮನ್ವಯ ಸಮಿತಿ ಸಂಯೋಜಕ ನಾಗಲಿಂಗಯ್ಯ ಮಠಪತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಶರಣು ಗದ್ದುಗೆ, ಶಿವಶರಣಪ್ಪ ಖಣದಾಳ, ತಿಪ್ಪಣ್ಣ ಲಂಡನಕರ್, ಮನೀಶ ಜಾಜು, ಎಸ್.ಜಿ. ಮಠ, ಮಹ್ಮದ್ ಅಯೂಭ್, ಮಹ್ಮದ್ ಅಸ್ಲಾಂ, ಮಹಾಲಿಂಗ ಬೆಲ್ದಾಳ, ನಾಗೇಶ ಬಿರಾದಾರ, ಉದಯಕುಮಾರ , ಶಿವಯೋಗಿ ಮತ್ತಿತತರು ನಿಯೋಗದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.