`ಎಚ್ಚರಿಕೆ ಕ್ರಮ ಪಾಲಿಸಿ'

7

`ಎಚ್ಚರಿಕೆ ಕ್ರಮ ಪಾಲಿಸಿ'

Published:
Updated:

ರಾಯಚೂರು: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ವ ಪಕ್ಷಗಳ ಕಾರ್ಯಕರ್ತರ ಸಭೆ ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಭವನದಲ್ಲಿ ನಡೆಯಿತು.ನೀತಿ ಸಂಹಿತೆ ಇತರ ವಿಷಯಗಳ ಕುರಿತು ಜಿಲ್ಲಾಧಿಕಾರಿ ಉಜ್ವಲ್‌ಕುಮಾರ ಘೋಷ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಚುನಾವಣೆ, ನಾಮಪತ್ರ ಭರ್ತಿ, ನೀತಿ ಸಂಹಿತೆ ಪಾಲನೆ, ಮೆರವಣಿಗೆ, ಸಭೆ ಸಮಾರಂಭಗಳನ್ನು ನಡೆಸುವುದು, ಚುನಾವಣಾ ಪ್ರಚಾರ ಇತ್ಯಾದಿಗಳ ಕುರಿತು ವಿವಿಧ ಪಕ್ಷಗಳ ಕಾರ್ಯಕರ್ತರಿಗೆ ಸಭೆಯಲ್ಲಿ ಡಿಸಿ ವಿವರಿಸಿದರು.ನಾಮ ಪತ್ರಗಳನ್ನು ತುಂಬುವ ಕೊನೆಯ ದಿನದಂದು ಅಥವಾ ಕೊನೆಯ ವೇಳೆಯಲ್ಲಿ ಅಭ್ಯರ್ಥಿಗಳು ಯಾವುದೇ ಪ್ರಮಾಣ ಪತ್ರಗಳನ್ನು ತಂದಿಲ್ಲವೆಂದು ಕೊಠಡಿಯಿಂದ ನಿರ್ಗಮಿಸುವಂತಿಲ್ಲ. ಈ ಕುರಿತು ಮೊದಲೇ ತಯಾರಿ ನಡೆಸಿಕೊಂಡು ಬರಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ ತಿಮ್ಮಪ್ಪ ತಿಳಿಸಿದರು.ಅಭ್ಯರ್ಥಿಗಳು ಖರ್ಚು ವೆಚ್ಚಗಳ ಬಗ್ಗೆ ತೀವ್ರ ನಿಗಾ ವಹಿಸುತ್ತಿರುವ ಚುನಾವಣಾ ಅಯೋಗ ಸರಿಯಾದ ಲೆಕ್ಕ ಪತ್ರಗಳನ್ನು ಇಟ್ಟುಕೊಳ್ಳುವಂತೆ ಮತ್ತು ಆಯೋಗ ನಿಗದಿಪಡಿಸಿದ ಮೊತ್ತದಲ್ಲಿ ವೆಚ್ಚಗಳನು ಸರಿದೂಗಿಸಲು ಜಿಲ್ಲಾಧಿಕಾರಿ ತಿಳಿಸಿದರು. ಚುನಾವಣೆ ವೆಚ್ಚಗಳ ಕುರಿತಾದ ಪರಿಶೀಲನೆಗಾಗಿ ಪರಿವೀಕ್ಷಕರು ಆಗಮಿಸುತ್ತಿದ್ದು, ಕಟ್ಟು ನಿಟ್ಟಿನ ಪಾಲನೆಗೆ ಸಹಕರಿಸುವಂತೆ ಅವರು ವಿವಿಧ ಪಕ್ಷಗಳ ಪ್ರತಿನಿಧಿಗಳಿಗೆ ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಬಿ ಬಿಸ್ನಳ್ಳಿ,  ಸಹಾಯಕ ಆಯುಕ್ತೆ ಮಂಜುಶ್ರೀ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ ತಿಮ್ಮಪ್ಪ ಹಾಗೂ ವಿವಿಧ ರಾಜಕಿಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry