ಶನಿವಾರ, ಏಪ್ರಿಲ್ 17, 2021
32 °C

ಎಚ್ಚರ ಬಂದಿದೆ ಬೆಳಕಿನ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಗ ದೀಪಾವಳಿ ಸಂಭ್ರಮ. ದೀಪಾವಳಿ ಎಂದರೆ ಪಟಾಕಿಯ ಹಬ್ಬ. ಪಟಾಕಿ ಸಿಡಿಸಿ ಪ್ರತಿ ವರ್ಷವೂ ಹಲವಾರು ಮಕ್ಕಳು ಕಣ್ಣುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ದೊಡ್ಡವರಿಗೂ ಅಪಾಯ ಆಗಿರುವ ಉದಾಹರಣೆಗಳುಂಟು. ಆದರೆ ಪಟಾಕಿ ಸಿಡಿಸಬೇಡಿ ಎಂದರೆ ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಸಿಟ್ಟು ಬಂದೀತು.ಪಟಾಕಿ ಸಿಡಿಸಿದರೇನೇ ಅದು ದೀಪಾವಳಿ ಹಬ್ಬ ಎನ್ನುವಷ್ಟರ ಮಟ್ಟಿಗೆ ಇಂದು ಮನಃಸ್ಥಿತಿ ಬದಲಾಗಿದೆ. ಈ ಖುಷಿಯ ಹೊರತಾಗಿ ಆರೋಗ್ಯ ಸಮಸ್ಯೆಯತ್ತ ಯೋಚಿಸಿದರೆ ಪಟಾಕಿಯಿಂದ ಆರೋಗ್ಯದ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ ಎಂಬ ಸಂಪೂರ್ಣ ಅರಿವಾಗುತ್ತದೆ.ಹೀಗಾಗಿ ಉಸಿರಾಟದ ತೊಂದರೆ ಇರುವವರು, ಹೃದ್ರೋಗಿಗಳು, ಹಸುಗೂಸು, ಪುಟ್ಟ ಮಕ್ಕಳನ್ನು ಈ ಸಮಯದಲ್ಲಿ ಹೆಚ್ಚು ಜಾಗ್ರತೆಯಿಂದ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಪಟಾಕಿಯ ಹೊಗೆ ಮತ್ತು ಶಬ್ದ ಆರೋಗ್ಯದ ಮೇಲೆ ಬೀರುವ ಪ್ರತಿಕೂಲ ಪರಿಣಾಮವನ್ನು ಜೀವನ ಪೂರ್ತಿ ಎದುರಿಸಬೇಕಾಗುತ್ತದೆ ಜಾಗ್ರತೆ!ಪಟಾಕಿ ಹೊಗೆ ಆರೋಗ್ಯದ ಮೇಲೆ ಹೀಗೆ ಪರಿಣಾಮ ಬೀರುತ್ತದೆ:ಕಣ್ಣಿನಲ್ಲಿ ಉರಿ ಉಂಟಾಗಿ ಕಣ್ಣು ಕೆಂಪಾಗುತ್ತದೆ. ಎಲ್ಲ ವಯೋಮಾನದವರಲ್ಲೂ ಈ ಪರಿಣಾಮ ಗೋಚರಿಸುತ್ತದೆ. ಇದರ ಶಬ್ದ ಅತಿಯಾದರೆ ಕಿವಿಯ ತಮಟೆಯ ಶಕ್ತಿ ಕುಂದುತ್ತದೆ.ಮಕ್ಕಳ ಮೂಗು ಮತ್ತು ಗಂಟಲಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಸೂಕ್ಷ್ಮ ಆರೋಗ್ಯವುಳ್ಳ ಮಕ್ಕಳಲ್ಲಿ ಊತವೂ ಕಾಣಿಸಿಕೊಳ್ಳುತ್ತದೆ. ಕೆಮ್ಮು ಆರಂಭವಾಗಿ ಎದೆ ಉರಿಯಾಗುತ್ತದೆ.ಶ್ವಾಸಕೋಶದ ತೊಂದರೆ ಉಂಟಾಗಿ ಕೆಮ್ಮು, ಸೀನು ಹೆಚ್ಚಾಗುತ್ತದೆ. ಅಲ್ಲದೆ ಆಸ್ತಮಾ ರೋಗಿಗಳು ಪಟಾಕಿ ಹೊಡೆಯುವ ಸ್ಥಳದಿಂದ ದೂರವಿದ್ದರೆ ಉತ್ತಮ. ಇಲ್ಲದಿದ್ದರೆ ತೊಂದರೆ ಉಲ್ಬಣವಾಗುವ ಸಾಧ್ಯತೆಯೇ ಹೆಚ್ಚು.ಪಟಾಕಿಗಳನ್ನು ಸಿಡಿಸುವುದರಿಂದ ಅಧಿಕ ರಕ್ತದೊತ್ತಡದಿಂದ (ಬಿಪಿ) ಬಳಲುವವರಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ತಲೆಸುತ್ತು, ತಲೆ ನೋವು ಮತ್ತು ತಲೆ ತಿರುಗುವುದು ಈ ಪರಿಣಾಮಗಳು ನಂತರ ಗೋಚರಿಸಲು ಪ್ರಾರಂಭವಾಗುತ್ತವೆ.ಈ ವಿಷಕಾರಿ ಅನಿಲವನ್ನು ಗರ್ಭಿಣಿಯರು ಸೇವಿಸಿದರೆ ತಾಯಿಗೆ ಮತ್ತು ಹುಟ್ಟಲಿರುವ ಮಗುವಿಗೆ ಇಬ್ಬರಿಗೂ ತೊಂದರೆ. ಹುಟ್ಟುತ್ತಲೇ ಉಸಿರಾಟದ ತೊಂದರೆಗೆ ಮಗು ಒಳಗಾಗಬಹುದು. ಆದ್ದರಿಂದ ಈ ಸಮಯದಲ್ಲಿ ಗರ್ಭಿಣಿಯರು ಜಾಗ್ರತೆ ವಹಿಸಲೇಬೇಕು.ಪಟಾಕಿ ಹೊಡೆಯುವ ಮುನ್ನ ಮತ್ತೊಮ್ಮೆ ಯೋಚಿಸಿ. ಹೊಡೆಯಲೇಬೇಕೆಂದಾದರೆ ಹಿತ ಮಿತವಾಗಿ, ಮತ್ತೊಬ್ಬರಿಗೆ ದೈಹಿಕವಾಗಿ ಯಾವುದೇ ತೊಂದರೆಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ಹೊಡೆಯಿರಿ. ನಿಮ್ಮ ಖುಷಿ ಇನ್ನೊಬ್ಬರ ಅಮೂಲ್ಯ ಜೀವನವನ್ನು ಕಸಿದುಕೊಳ್ಳದಿರಲಿ.ಪಟಾಕಿಗಳು ಯಾಕೆ ಅಪಾಯಕಾರಿ?

ಬಹುತೇಕ ಪಟಾಕಿಗಳಲ್ಲಿ ಮದ್ದಿನ ಪುಡಿ ಇರುತ್ತದೆ. ಇದು ಬೆಂಕಿ ತಾಗಿದ ಕೂಡಲೇ ಸಿಡಿಯುವುದರಿಂದ ಕಿಡಿ ನೇರವಾಗಿ ಕಣ್ಣಿಗೆ ತಾಗುವ ಸಂಭವ ಹೆಚ್ಚಾಗಿರುತ್ತದೆ.ಬಾಟಲಿ ರಾಕೆಟ್‌ಗಳು ಸಿಡಿದಾಗ ತಗುಲಿದ ಕಿಡಿಯಿಂದ ಶಾಶ್ವತವಾಗಿ ಕಣ್ಣು ಕಳೆದುಕೊಂಡಿರುವವರ ನಿದರ್ಶನಗಳು ಸಾಕಷ್ಟಿವೆ.ದೀಪಾವಳಿ ಸಮಯದಲ್ಲಿ ವಾಯು ಮಾಲಿನ್ಯದ ಮಟ್ಟ ಶೇ 6- 10ರಷ್ಟು ಹಾಗೂ ಶಬ್ದಮಾಲಿನ್ಯದ ಮಟ್ಟ ಶೇ 50ರಷ್ಟು ಹೆಚ್ಚಾಗುತ್ತದೆ.

ಏನು ಮಾಡಬೇಕು

ಹಿರಿಯರು ಪಟಾಕಿ ಸಿಡಿಸುವ ಮಕ್ಕಳ ಮೇಲೆ ಕಣ್ಗಾವಲು ಇಟ್ಟಿರಬೇಕುಪಟಾಕಿ ಹೊಡೆಯುವಾಗ ನೇತ್ರ ಸುರಕ್ಷಾ ಸಾಧನಗಳನ್ನು ಬಳಸಬೇಕುಬೆಂಕಿ ಅಥವಾ ಕಿಡಿ ತಗುಲಬಹುದಾದ ಸ್ಥಳದಿಂದ ಮತ್ತು ಪುಟ್ಟ ಮಕ್ಕಳಿಂದ ಪಟಾಕಿಗಳನ್ನು ದೂರ ಇರಿಸಬೇಕುಆಟದ ಮೈದಾನ ಅಥವಾ ದೊಡ್ಡ ಆವರಣಗಳಲ್ಲಿ ಮಾತ್ರ ಪಟಾಕಿಗಳನ್ನು ಹೊಡೆಯಬೇಕುಜನಸಂಚಾರ ಇರುವ ಜಾಗದಲ್ಲಿ ಪಟಾಕಿಗಳನ್ನು ಹೊಡೆಯಬಾರದುಪಟಾಕಿ ಹೊಡೆಯುವ ಸಂದರ್ಭದಲ್ಲಿ ಗಟ್ಟಿಯಾದ ಕಾಟನ್ ಬಟ್ಟೆಗಳನ್ನು ತೊಡಬೇಕು

ಏನು ಮಾಡಬಾರದುಸಿಲ್ಕ್ ಅಥವಾ ಪಾಲಿಯೆಸ್ಟರ್‌ಬಟ್ಟೆಗಳನ್ನು ತೊಡಬಾರದು.ಕಿಡಿ ಹೊತ್ತಿಸುವಾಗ ಪಟಾಕಿಯನ್ನು ಕೈಯಲ್ಲಿ ಹಿಡಿದುಕೊಳ್ಳಬಾರದು ಹೆಚ್ಚು ಶಬ್ದ ಬರಲಿ ಎಂಬ ಕಾರಣಕ್ಕೆ ಪಟಾಕಿಗಳನ್ನು ತವರದ ಡಬ್ಬ ಅಥವಾ ಗಾಜಿನ ಬಾಟಲಿಗಳ ಒಳಗಿಡಬಾರದು.ಸಿಡಿಯದ ಪಟಾಕಿಗಳನ್ನು ಪರೀಕ್ಷಿಸಲು ಹೋಗಬಾರದು. ಅದನ್ನು ಬಿಟ್ಟು ಹೊಸ ಪಟಾಕಿ ಹಚ್ಚಬೇಕು.ಹೀಗಿರಲಿ ಪ್ರಥಮ ಚಿಕಿತ್ಸೆ

ಕಣ್ಣಿಗೆ ಗಾಯವಾದಾಗಕಣ್ಣುಗಳನ್ನು ಉಜ್ಜಿಕೊಳ್ಳಬೇಡಿಸುಮಾರು ಅರ್ಧಗಂಟೆ ಕಣ್ಣುಗಳನ್ನು ನಿರಂತರವಾಗಿ ನೀರಿನಲ್ಲಿ ತೊಳೆಯಿರಿ.ಪಟಾಕಿಯ ದೊಡ್ಡ ಕಣವೇನಾದರೂ ಒಳಗೆ ಸಿಕ್ಕಿಹಾಕಿಕೊಂಡಿದ್ದರೆ ಬಲವಂತವಾಗಿ ಎಳೆದು ತೆಗೆಯಲು ಹೋಗಬೇಡಿ.ಕಣ್ಣುಗಳನ್ನು ಮುಚ್ಚಿಸಿ ಸೀದಾ ವೈದ್ಯರ ಬಳಿಗೆ ಕರೆದೊಯ್ಯಿರಿ.ಸುಟ್ಟ ಗಾಯವಾದಾಗ

ಗಾಯದ ಜಾಗವನ್ನು ಉಜ್ಜಬೇಡಿ, ಆದರೆ ಅದನ್ನು ಸ್ವಚ್ಛಗೊಳಿಸಿ ನೀರಿನಲ್ಲಿ ಮುಳುಗಿಸಿ. ಆದರೆ ಐಸ್ ನೀರು ಬಳಸಬೇಡಿ ಗಾಯದ ಸ್ಥಳ ಒಣಗಲು ಬಿಡಿ ಶುದ್ಧವಾದ ಬಟ್ಟೆಯಿಂದ ಗಾಯವನ್ನು ಮುಚ್ಚಿ.ಪಟಾಕಿಯಿಂದ ಸಂಭವಿಸುವ ಎಲ್ಲ ರೀತಿಯ ತೊಂದರೆಗಳು ಅಥವಾ ದುರಂತಗಳಿಗೆ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯೇ ಪ್ರಮುಖ ಕಾರಣವಾಗಿರುತ್ತದೆ. ಸರಳವಾದ ಮುಂಜಾಗ್ರತಾ ಕ್ರಮಗಳಿಂದ ಇಂತಹ ಅನಾಹುತಗಳನ್ನು ತಪ್ಪಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.