ಬುಧವಾರ, ಮಾರ್ಚ್ 3, 2021
24 °C

ಎಚ್ಚೆತ್ತಿದ್ದು ತಡ: ಹೊಣೆ ಹೊತ್ತ ಪ್ರಣವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್ಚೆತ್ತಿದ್ದು ತಡ: ಹೊಣೆ ಹೊತ್ತ ಪ್ರಣವ್‌

ನವದೆಹಲಿ (ಪಿಟಿಐ): ‘ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ ವಿಚಾರದಲ್ಲಿ ಭಾರತ ತಡವಾಗಿ ಎಚ್ಚೆತ್ತುಕೊಂಡಿದೆ’ ಎಂದಿರುವ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ‘ಇದಕ್ಕೆ ನಾನು ಕೂಡಾ ಕಾರಣ’ ಎಂದು ಹೇಳಿದ್ದಾರೆ.‘ಈ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಿಲ್ಲ. ಏಕೆಂದರೆ ನಾನು ಹಲವು ವರ್ಷಗಳ ಕಾಲ ಹಣಕಾಸು ಸಚಿವನಾಗಿದ್ದೆ. ಆದ್ದರಿಂದ ಇದರ ಜವಾಬ್ದಾರಿಯನ್ನು  ಹೊತ್ತುಕೊಳ್ಳುವೆ’ ಎಂದು ಶುಕ್ರವಾರ ರಾತ್ರಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ತಿಳಿಸಿದ್ದಾರೆ.‘ಸ್ಟಾರ್ಟ್‌ ಅಪ್‌’ ಇಂಡಿಯಾ ಯೋಜನೆ ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರಪತಿ ಶ್ಲಾಘಿಸಿದರು.

‘ಉದ್ಯಮಿಗಳಿಗೆ ಉತ್ತೇಜನ ನೀಡುವಂತಹ ವಾತಾವರಣ ಸೃಷ್ಟಿಸುವುದು ಸರ್ಕಾರದ ಕೆಲಸ. ಈ ಕೆಲಸವನ್ನು ನಾವು ತುಂಬಾ ತಡವಾಗಿ ಮಾಡಿದ್ದೇವೆ. ಏನೇ ಆಗಲಿ, ಕೊನೆಗೂ ಅಂತಹ ಕೆಲಸ ನಡೆದಿದೆ. ನಾವು ಎಚ್ಚೆತ್ತುಕೊಂಡಿದ್ದೇವೆ’ ಎಂದು ಅವರು ಹೇಳಿದ್ದಾರೆ.‘ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತರು ಮತ್ತು ಉದ್ಯಮಶೀಲತೆ ಸಾಮರ್ಥ್ಯ ಹೊಂದಿದವರಿದ್ದಾರೆ. ಅವರಿಗೆ ಸರಿಯಾದ ಪ್ರೋತ್ಸಾಹ ನೀಡದಿದ್ದರೆ ನಿರೀಕ್ಷಿತ ಪ್ರಗತಿ ಸಾಧ್ಯವಿಲ್ಲ. ಕೇವಲ ರಾಜಕೀಯ ಸ್ವಾತಂತ್ರ್ಯ ಇದ್ದರೆ ಸಾಲದು, ಜತೆಗೆ ಆರ್ಥಿಕ ಸ್ವಾತಂತ್ರ್ಯವೂ ಇರಬೇಕು. ಹಾಗಾದಲ್ಲಿ ದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬಹುದು’ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.