ಸೋಮವಾರ, ಮಾರ್ಚ್ 1, 2021
24 °C
ಲೆಕ್ಕಪರಿಶೋಧನಾ ವರದಿ ಕುರಿತು ಪ್ರಮುಖರ ಪ್ರತಿಕ್ರಿಯೆ; ತನಿಖೆಗೆ ಆಗ್ರಹ

ಎಚ್ಚೆತ್ತುಕೊಳ್ಳದಿದ್ದರೆ ಅಭಿವೃದ್ಧಿ ಮರೀಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್ಚೆತ್ತುಕೊಳ್ಳದಿದ್ದರೆ ಅಭಿವೃದ್ಧಿ ಮರೀಚಿಕೆ

ಮಂಡ್ಯ: ನಗರಸಭೆಯಲ್ಲಿ ಆಗಿರುವ ಹಲವಾರು ಲೋಪದೋಷಗಳ ಕುರಿತು ಲೆಕ್ಕಪರಿಶೋಧನಾ ವರದಿಯಲ್ಲಿ ಎತ್ತಿದ್ದ ಆಕ್ಷೇಪಣೆ ಹಾಗೂ ವಸೂಲಾತಿ ಸೂಚನೆಗಳ ಬಗೆಗೆ ‘ಪ್ರಜಾವಾಣಿ’ ಸರಣಿ ವರದಿ ಮಾಡಿದೆ.ತೆರಿಗೆ, ಬಾಡಿಗೆ ವಸೂಲಿ, ಜಾಹೀರಾತು ಹಾಗೂ ಉದ್ದಿಮೆಗಳ ಮಾಹಿತಿ ಕೊರತೆ, ಅವುಗಳಿಂದ ಬರುವ ಆದಾಯದ ವಿವರ ಸಲ್ಲಿಕೆಯಾಗದಿರುವುದು, ಹಲವಾರು ವರ್ಷಗಳಿಂದ ಟೆಂಡರ್‌ ಕರೆಯದೇ ಗುತ್ತಿಗೆ ಮುಂದುವರೆಸಿರುವುದು ಸೇರಿದಂತೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ.ನಗರಸಭೆಯು ಆರ್ಥಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮಕೈಗೊಳ್ಳದಿದ್ದರೆ, ಆಡಳಿತದಲ್ಲಿ ಬಿಗುವು ತರದಿದ್ದರೆ ಮುಂದಿನ ದಿನಗಳಲ್ಲಿ ಮಂಡ್ಯದ ಜನರು ತೊಂದರೆ ಎದುರಿಸಬೇಕಾಗುತ್ತದೆ. ಮಂಡ್ಯ ನಗರವು ಒಂದು ದೊಡ್ಡ ಹಳ್ಳಿ ಎಂದು ಹೇಳುವ ಮಾತು ನಿಜವಾಗುತ್ತದೆ. ವರದಿ ಕುರಿತು ಹಲವರು ನೀಡಿರುವ ಪ್ರತಿಕ್ರಿಯೆಗಳು ಇಂತಿವೆ.ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆ

ನಗರಸಭೆಯಲ್ಲಿ ನಡೆದಿರುವ ಕಾನೂನು ಉಲ್ಲಂಘನೆ ಕಾರ್ಯಗಳ ಬಗೆಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಅಜಯ್‌ ನಾಗಭೂಷಣ್‌ ಅವರಿಗೆ ಮನವಿ ಸಲ್ಲಿಸುತ್ತೇನೆ ‘ಪ್ರಜಾವಾಣಿ’ಯಲ್ಲಿ ಪ್ರಕಟ ವಾಗಿರುವ ವರದಿ ನೋಡಿದ್ದೇನೆ. ಅದರ ಒಂದು ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದರು.ಲೆಕ್ಕ ಪತ್ರ ಸಲ್ಲಿಸಬೇಕಾದದ್ದು ನಗರಸಭೆ ಸಿಬ್ಬಂದಿಯ ಕೆಲಸ. ಅದನ್ನು ಸರಿಯಾಗಿ ಮಾಡದಿರುವುದು ವರದಿಯಿಂದ ತಿಳಿದು ಬಂದಿದೆ. ಆ ಬಗ್ಗೆ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಲಾಗುವುದು ಎಂದರು.

–ಹೊಸಹಳ್ಳಿ ಬೋರೇಗೌಡ, ಅಧ್ಯಕ್ಷರು, ನಗರಸಭೆ.ಅನುಪಾಲನಾ ವರದಿ ಸಲ್ಲಿಕೆ

ಲೆಕ್ಕ ಪರಿಶೋಧನಾ ವರದಿಯಲ್ಲಿನ ಆಕ್ಷೇಪಣೆಗಳಿಗೆ ಅನುಪಾಲನಾ ವರದಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶವಿದೆ. ಅನುಪಾಲನಾ ವರದಿ ಸಿದ್ಧಪಡಿಸುವ ಕೆಲಸ ನಡೆದಿದೆ. ಅನುಪಾಲನಾ ವರದಿ ಸಲ್ಲಿಸಲಾಗುವುದು. ಆಡಳಿತ ಸುಧಾರಣೆಗೆ ಅವಶ್ಯಕ ಕ್ರಮಕೈಗೊಳ್ಳಲಾಗುವುದು –ನರಸಿಂಹಮೂರ್ತಿ, ಪೌರಾಯುಕ್ತರು, ನಗರಸಭೆ

ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಮಂಡ್ಯದ ಕಾರ್ಮಿಕರ ಕಾಲೊನಿಯ ಮನೆಗಳನ್ನು ಅವಧಿಗೆ ಮುಂಚೆ ಹಕ್ಕು ವರ್ಗಾವಣೆ ಮಾಡಿರುವುದು ತಪ್ಪು. ಅಂತಹ ನೂರಾರು ಪ್ರಕರಣಗಳು ನಡೆದಿವೆ. ತೆರಿಗೆ ವಸೂಲಾತಿಯೂ ಸರಿಯಾಗಿ ಆಗುತ್ತಿಲ್ಲ. ಅಲ್ಲಿಯೂ ವ್ಯತ್ಯಾಸಗಳಿವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.

– ಎಂ.ಪಿ. ಅರುಣಕುಮಾರ್, ನಗರಸಭೆ ಸದಸ್ಯಸ್ವತಂತ್ರ ಏಜೆನ್ಸಿಯಿಂದ ತನಿಖೆ ಮಾಡಿಸಲಿ

ಲೆಕ್ಕ ಪರಿಶೋಧನಾ ವರದಿಯಲ್ಲಿ ಗಂಭೀರ ಆರೋಪಗಳು ಬಂದರೂ ಕ್ರಮಕೈಗೊಂಡಿಲ್ಲ. ಜಿಲ್ಲಾಧಿಕಾರಿ ಅವರು ಸ್ವತಂತ್ರ ಏಜೆನ್ಸಿಯಿಂದ ತನಿಖೆ ಮಾಡಿಸಬೇಕು. ಸತ್ಯ ಏನು ಎನ್ನುವುದು ಬಹಿರಂಗವಾಗಬೇಕು. ಸಾರ್ವಜನಿಕರ ಹಣ ದುರ್ಬಳಕೆಯಾಗದಂತೆ ಕ್ರಮಕೈಗೊಳ್ಳಬೇಕು.

– ಸೋಮಶೇಖರ ಕೆರಗೋಡು, ನಗರಸಭೆ ಸದಸ್ಯನಗರಸಭೆಗೆ ಎಚ್ಚರಿಕೆ ಗಂಟೆ

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿ ನಗರಸಭೆಗೆ ಎಚ್ಚರಿಕೆ ಗಂಟೆಯಾಗಿದೆ. ಆಗಿರುವ ತಪ್ಪುಗಳನ್ನು ಕೂಡಲೇ ಸರಿಪಡಿಸುವ ಕಾರ್ಯ ಆಗಬೇಕು. ಮುಂದಿನ ದಿನಗಳಲ್ಲಿ ಒಟ್ಟಾಗಿ ನಗರದ ಅಭಿವೃದ್ಧಿಗೆ ಶ್ರಮಿಸುವಂತಾಗಬೇಕು.

– ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘಹಳಿತಪ್ಪಿದ ಆಡಳಿತ

ನಗರವನ್ನು ಸ್ವಚ್ಛಗೊಳಿಸಬೇಕಾಗಿದ್ದ ನಗರಸಭೆಯೇ ಅಶುದ್ಧವಾಗಿದೆ. ನಗರಸಭೆಯು ಗಾಂಪರ ಗುಂಪಾಗಿದೆ. ಆಡಳಿತ ಹಳಿ ತಪ್ಪಿದೆ.

ಅದನ್ನು ಸರಿದಾರಿಗೆ ತರಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು

ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು.

– ಶಂಭೂನಹಳ್ಳಿ ಸುರೇಶ್‌, ಮುಖಂಡರು, ರೈತ ಸಂಘ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.