ಸೋಮವಾರ, ಮೇ 17, 2021
22 °C

ಎಚ್.ಡಿ.ಕೋಟೆ: ಶವಸಂಸ್ಕಾರಕ್ಕೆ ಸೋಲಾರ್ ಬೇಲಿ ಅಡ್ಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ: ಆದಿವಾಸಿ ಮಹಿಳೆಯ ಶವ ಸಂಸ್ಕಾರ ಮಾಡಲು  `ಜಮ್ಮಾ' (ಸ್ಮಶಾನ) ಕ್ಕೆ ತೆರಳಲು ಅಡ್ಡಿಯಾದ ಸೋಲಾರ್ ಬೇಲಿಯನ್ನು ಅರಣ್ಯ ಅಧಿಕಾರಿಗಳು ತೆರೆದು ಕೊಡಲಿಲ್ಲ ಎಂದು ಆದಿವಾಸಿಗಳು ಮೂರು ದಿನ ಶವವನ್ನು ಇಟ್ಟುಕೊಂಡು ಕಾಯುತ್ತಿದ್ದ ಘಟನೆ ತಾಲ್ಲೂಕಿನ ಹೂಣಸೇಕುಪ್ಪೆ ಗ್ರಾಮದಲ್ಲಿ ನಡೆದಿದೆ.ಆದಿವಾಸಿಗಳು ಬುಧವಾರ ಮೃತಪಟ್ಟ ಗೌರಿಯ ಶವವನ್ನು ಗುರುವಾರ ಸಂಸ್ಕಾರ ಮಾಡಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಸ್ಮಶಾನದ ಹಾದಿಗೆ ಸೋಲಾರ್ ಬೇಲಿ ಅಡ್ಡಿಯಾಗಿತ್ತು. ನಂತರ ಆದಿವಾಸಿಗಳು ಶವವನ್ನು ಇಟ್ಟು ಕಾಯುತ್ತಿದ್ದುದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಬೇಲಿಯನ್ನು ತೆರೆದುಕೊಟ್ಟರು.ನಂತರ ಶವ ಸಂಸ್ಕಾರ ನಡೆಯಿತು.ಆನೆಗಳ ಹಾವಳಿ ತಡೆಯಲು ಸೋಲಾರ್ ಬೇಲಿ ಹಾಕಲಾಗಿತ್ತು ಎಂದು ತಿಳಿದುಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.