ಎಚ್‌ಎಎಲ್:ಷೇರುವಿಕ್ರಯಕ್ಕೆ ರಕ್ಷಣ ಸಚಿವಾಲಯ ಒಪ್ಪಿಗೆ

ಶನಿವಾರ, ಮೇ 25, 2019
22 °C

ಎಚ್‌ಎಎಲ್:ಷೇರುವಿಕ್ರಯಕ್ಕೆ ರಕ್ಷಣ ಸಚಿವಾಲಯ ಒಪ್ಪಿಗೆ

Published:
Updated:

ನವದೆಹಲಿ: ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ (ಎಚ್‌ಎಎಲ್) ಕೇಂದ್ರ ಸರ್ಕಾರ ಹೊಂದಿರುವ  ಪಾಲಿನಲ್ಲಿ   ಶೇ 10ರಷ್ಟು ಷೇರು ವಿಕ್ರಯಕ್ಕೆ  ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.ಷೇರು ವಿಕ್ರಯ ಮೂಲಕ ಬರುವ ಮೊತ್ತವನ್ನು `ಎಚ್‌ಎಎಲ್~ನ ಭವಿಷ್ಯದ ತಂತ್ರಜ್ಞಾನ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಯೂರೋಪ್ ಮೂಲದ ಬಹು ಸಾಮರ್ಥ್ಯದ ಯುದ್ಧವಿಮಾನ, ತೇಜಸ್ ಲಘು ಯುದ್ಧವಿಮಾನ, ಮತ್ತು ಭಾರತ-ರಷ್ಯಾ ಐದನೆಯ ತಲೆಮಾರಿನ ಯುದ್ಧ ವಿಮಾನಗಳ ಅಭಿವೃದ್ಧಿಗೆ ಈ ಹಣ ಬಳಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.`ಮುಂದಿನ 5 ವರ್ಷಗಳಲ್ಲಿ `ಎಚ್‌ಎಎಲ್~ನ ಶೇ 10ರಷ್ಟು ಷೇರು ವಿಕ್ರಯಕ್ಕೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಆದಾಗ್ಯೂ, ಪ್ರಧಾನಿ ಅಧ್ಯಕ್ಷತೆಯಲ್ಲಿರುವ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಸದೀಯ ಸಮಿತಿ (ಸಿಸಿಇಎ) ಇದಕ್ಕೆ ಅಂತಿಮ ಒಪ್ಪಿಗೆ ಸೂಚಿಸಬೇಕಿದೆ~ ಎಂದು ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.`ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಒಂಬತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಷೇರು ವಿಕ್ರಯಕ್ಕೆ ಸರ್ಕಾರ ಅನುಮತಿ ನೀಡುತ್ತಿರುವ ಮೂರನೆಯ ಸಂಸ್ಥೆ  `ಎಚ್‌ಎಎಲ್~ ಆಗಿದೆ. ಈಗಾಗಲೇ ಬೆಂಗಳೂರು ಮೂಲದ `ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಮತ್ತು  ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನಲ್ಲಿನ ಶೇ 66 ಮತ್ತು ಶೇ 75ರಷ್ಟು ಷೇರು ವಿಕ್ರಯಕ್ಕೆ ಸರ್ಕಾರ ಅನುಮತಿ ನೀಡಿದೆ.`ಎಚ್‌ಎಎಲ್~ನ  ಒಟ್ಟು ಸಂಪತ್ತಿನ ಮಾಹಿತಿ ಪಡೆದುಕೊಂಡು ನಂತರ, ಹಣಕಾಸು ಸಚಿವಾಲಯ ಷೇರು ವಿಕ್ರಯದ ಮೂಲಕ ಸಂಗ್ರಹಿಸಿಸಬೇಕಾದ ಮೊತ್ತವನ್ನು ಅಂತಿಮಗೊಳಿಸಲಿದೆ. ಹಣಕಾಸು ಸಚಿವಾಲಯ ಹಸಿರು ನಿಶಾನೆ ತೋರಿಸಿದ ನಂತರ ಮಾತ್ರವೇ ರಕ್ಷಣಾ ಸಚಿವಾಲಯ ಈ ಪ್ರಸ್ತಾವನ್ನು `ಸಿಸಿಇಎ~ ಮುಂದೆ ಇಡಬಹುದು.2010-11ನೇ ಸಾಲಿನಲ್ಲಿ `ಎಚ್‌ಎಲ್~ ್ಙ13,061 ಕೋಟಿ ವಹಿವಾಟು ದಾಖಲಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 14ರಷ್ಟು ಪ್ರಗತಿ ದಾಖಲಿಸಿದೆ. ತೆರಿಗೆ ಪೂರ್ವ ಲಾಭವೂ ಈ ಅವಧಿಯಲ್ಲಿ ್ಙ2,718 ಕೋಟಿಗಳಷ್ಟಾಗಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry