ಬುಧವಾರ, ಅಕ್ಟೋಬರ್ 16, 2019
26 °C

ಎಚ್‌ಎಎಲ್‌ಗೆ ಕಠಿಣ ಸವಾಲು

Published:
Updated:

ಕೋಲ್ಕತ್ತ (ಪಿಟಿಐ): ಬೆಂಗಳೂರಿನ ಎಚ್‌ಎಎಲ್ ತಂಡದವರು ಐ-ಲೀಗ್ ಫುಟ್‌ಬಾಲ್ ಪಂದ್ಯದಲ್ಲಿ ಶನಿವಾರ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಎದುರಿಸಲಿದ್ದಾರೆ.

ಹದಿನಾಲ್ಕು ತಂಡಗಳ ಈ ಲೀಗ್‌ನಲ್ಲಿ ಎಚ್‌ಎಎಲ್ ಈಗಾಗಲೇ ಹನ್ನೊಂದು ಪಂದ್ಯಗಳಲ್ಲಿ ನಿರಾಸೆಗೊಂಡಿದೆ. ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡು ಲೀಗ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.  ಆದರೆ ಯುನೈಟೆಡ್ ಉತ್ತಮ ಸ್ಥಿತಿಯಲ್ಲಿದೆ. 21 ಪಾಯಿಂಟುಗಳನ್ನು ಗಳಿಸಿರುವ ಅದಕ್ಕೆ ಎರಡು ಪಾಯಿಂಟುಗಳನ್ನು ಮಾತ್ರ ಖಾತೆಯಲ್ಲಿ ಹೊಂದಿರುವ ಎಚ್‌ಎಎಲ್ ತಂಡವು ಪ್ರಬಲ ಸವಾಲು ಎನಿಸದು.

Post Comments (+)