ಶುಕ್ರವಾರ, ಜೂನ್ 18, 2021
24 °C

ಎಚ್‌ಎಎಲ್‌ ಅವ್ಯವಹಾರ: ಶೀಘ್ರ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಏರೋ­ನಾಟಿಕ್ಸ್‌ಗೆ (ಎಚ್‌ಎಎಲ್‌) ಲಂಡನ್‌ ಮೂಲದ ರೋಲ್ಸ್‌ ರಾಯ್ಸ್‌ ಕಂಪೆನಿ ಪೂರೈಸಿರುವ ವಿಮಾನದ ಎಂಜಿನ್‌ನಲ್ಲಿ ನಡೆದಿದೆ ಎನ್ನಲಾಗಿರುವ ₨10,000 ಕೋಟಿ ಅವ್ಯವಹಾರದ ಕುರಿತು ಸಿಬಿಐ ಒಂದೆರಡು ದಿನದಲ್ಲಿ ತನಿಖೆ ಆರಂಭಿಸಲಿದೆ.ವಿಮಾನದ ಎಂಜಿನ್‌ ಪೂರೈಕೆ ಹಾಗೂ ದಾಖಲೆಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಿಬಿಐಗೆ ರಕ್ಷಣಾ ಸಚಿವಾಲಯ ದೂರು ಸಲ್ಲಿಸಿತ್ತು. ತನಿಖೆ  ನಡೆಸುವಂತೆ ಸಿಬಿಐಗೆ ರಕ್ಷಣಾ ಸಚಿವ ಎ.ಕೆ.ಅಂಟನಿ ಆದೇಶ ನೀಡಿದ್ದರು.ಪ್ರಾಥಮಿಕ ತನಿಖೆ ಬುಧವಾರದಿಂದ ಆರಂಭವಾಗಲಿದೆ ಎನ್ನಲಾಗುತ್ತಿದೆ. ತನಿಖೆ ನಡೆಸುವ ಬಗ್ಗೆ ಪ್ರತಿಕ್ರಿಯಿ ಸಿರುವ ರೋಲ್ಸ್‌ ರಾಯ್ಸ್‌ ಕಂಪೆನಿಯ ವಕ್ತಾರರು, ‘ನಾವು ತನಿಖೆ ಸಂಪೂರ್ಣ ವಾಗಿ ಸಹಕರಿಸುತ್ತೇವೆ’ ಎಂದು ಹೇಳಿದ್ದಾರೆ.ಸಿಬಿಐ ತನಿಖೆ ಆರಂಭವಾಗಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರೋಲ್ಸ್‌ ರಾಯ್ಸ್‌, ಕಮಿಷನ್‌ ಏಜೆಂಟರಿಗೆ ನೀಡಿದ ₨18 ಕೋಟಿಯನ್ನು ಸರ್ಕಾರಕ್ಕೆ ವಾಪಸ್‌ ನೀಡುವುದಾಗಿ ಎಚ್‌ಎಎಲ್‌ಗೆ  ಪತ್ರ ಬರೆದಿದೆ. ಮುಂದಿನ ಕ್ರಮಕ್ಕಾಗಿ ಎಚ್‌ಎಎಲ್ ಈ ಪತ್ರವನ್ನು ಸರ್ಕಾರಕ್ಕೆ ಕಳುಹಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.