ಎಚ್‌ಎಎಲ್- ಕೆಎಸ್‌ಪಿ ಪಂದ್ಯ ಡ್ರಾ

7

ಎಚ್‌ಎಎಲ್- ಕೆಎಸ್‌ಪಿ ಪಂದ್ಯ ಡ್ರಾ

Published:
Updated:
ಎಚ್‌ಎಎಲ್- ಕೆಎಸ್‌ಪಿ ಪಂದ್ಯ ಡ್ರಾ

ಬೆಂಗಳೂರು: ಎಚ್‌ಎಎಲ್ ಮತ್ತು ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡಗಳ ನಡುವಿನ ರಾಜ್ಯ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯ 1-1 ಗೋಲಿನಿಂದ ಡ್ರಾದಲ್ಲಿ ಕೊನೆಗೊಂಡಿತು.

ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ಎಚ್‌ಎಎಲ್ ತಂಡದವರು ಚುರುಕಿನ ಪ್ರದರ್ಶನ ನೀಡಲು ವಿಫಲರಾದರು. ರಾಕೇಶ್ ಬಾಬು ಅವರು ಮೂರನೇ ನಿಮಿಷದಲ್ಲಿ ಗೋಲು ಗಳಿಸಿ          ಕೆಎಸ್‌ಪಿಯ ಮುನ್ನಡೆಗೆ ಕಾರಣರಾದರು. ಜಗದೀಶ್ 19ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿ ಎಚ್‌ಎಎಲ್‌ಗೆ ಸಮಬಲ ತಂದಿತ್ತರು. ಕೆಎಸ್‌ಪಿ ತಂಡದ ಕಾರ್ತಿಕ್ ಎದುರಾಳಿ ತಂಡದ ಕಾರ್ತಿಕೇಯನ್ ಅವರನ್ನು ಕೆಳಕ್ಕೆ ಬೀಳಿಸಿದ್ದಕ್ಕೆ ರೆಫರಿ ಪೆನಾಲ್ಟಿ ವಿಧಿಸಿದರು. ಅದನ್ನು ಎಚ್‌ಎಎಲ್ ತಂಡ ಸದುಪಯೋಗಪಡಿಸಿಕೊಂಡಿತು.ಎರಡನೇ ಅವಧಿಯಲ್ಲಿ ಉಭಯ ತಂಡಗಳು ಗೆಲುವಿನ ಗೋಲಿಗಾಗಿ ಸಾಕಷ್ಟು ಪ್ರಯತ್ನ ನಡೆಸಿದವು. ಆದರೆ ಎರಡೂ ತಂಡಗಳ ಆಟಗಾರರಲ್ಲಿ ಹೊಂದಾಣಿಕೆಯ ಕೊರತೆ ಕಂಡಿತು. 58 ನೇ ನಿಮಿಷದಲ್ಲಿ ಎಚ್‌ಎಎಲ್ ತಂಡದ ಆರ್.ಸಿ. ಪ್ರಕಾಶ್ ಥ್ರೋಪಾಸ್‌ನಿಂದ ಚೆಂಡನ್ನು ನಿಯಂತ್ರಣಕ್ಕೆ ಪಡೆಯಲು ವಿಫಲರಾಗಿ ಗೋಲು ಗಳಿಸುವ ಅವಕಾಶ ಕಳೆದುಕೊಂಡರು.ಭಾನುವಾರ ನಡೆದ ಬೆಂಗಳೂರು ಮಾರ್ಸ್‌ ಮತ್ತು ಬಿಯುಎಫ್‌ಸಿ ನಡುವಿನ `ಎ~ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯ ಕೂಡಾ 1-1 ಗೋಲಿನಿಂದ ಡ್ರಾದಲ್ಲಿ ಅಂತ್ಯಕಂಡಿತು. ಕ್ಲೈವರ್ಟ್ 45ನೇ ನಿಮಿಷದಲ್ಲಿ ಬಿಯುಎಫ್‌ಸಿಗೆ ಮುನ್ನಡೆ ತಂದಿತ್ತರೆ, ಶರತ್ 79ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ತಂದಿತ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry