ಮಂಗಳವಾರ, ನವೆಂಬರ್ 19, 2019
29 °C

`ಎಚ್‌ಎಎಲ್' ಷೇರು ವಿಕ್ರಯ: ನವೆಂಬರ್‌ಗೆ ಐಪಿಒ

Published:
Updated:

ನವದೆಹಲಿ(ಪಿಟಿಐ): ದೇಶದ ರಕ್ಷಣಾ ಕ್ಷೇತ್ರದ ಪ್ರತಿಷ್ಠಿತ ಉದ್ಯಮ ಸಂಸ್ಥೆ `ಹಿಂದೂಸ್ತಾನ ಏರೊನಾಟಿಕ್ಸ್ ಲಿ.'(ಎಚ್‌ಎಎಲ್)ನ ಶೇ 10ರಷ್ಟು ಷೇರುಗಳನ್ನು `ಆರಂಭಿಕ ಸಾರ್ವಜನಿಕ ಕೊಡುಗೆ'(ಐಪಿಒ) ಶೈಲಿಯಲ್ಲಿ ಮಾರಾಟ ಮಾಡಿ ಬಂಡವಾಳ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ.`ಎಚ್‌ಎಎಲ್'ನಲ್ಲಿ ಷೇರುಗಳನ್ನು ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ವಿಕ್ರಯಿಸಲಾಗುವುದು. ಈ ಕುರಿತ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ' ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿ ಸುದ್ದಿಸಂಸ್ಥೆ ತಿಳಿಸಿದ್ದಾರೆ.ಷೇರು ವಿಕ್ರಯ ಪ್ರಕ್ರಿಯೆ ನೋಡಿಕೊಳ್ಳಲು ಎಸ್‌ಬಿಐ ಕ್ಯಾಪ್, ಗೋಲ್ಡ್‌ಮನ್ ಸ್ಯಾಚ್ಸ್, ಬರ್ಕ್ಲೀರ್ಸ್ ಮತ್ತು ಆಕ್ಸಿಸ್ ಕ್ಯಾಪಿಟಲ್ ಸಂಸ್ಥೆಗಳನ್ನು ಮರ್ಚೆಂಟ್ ಬ್ಯಾಂಕರ್ಸ್ ಎಂದು ನೇಮಿಸಲಾಗಿದೆ. ಈ ಸಂಸ್ಥೆಗಳು ಸದ್ಯ `ಎಚ್‌ಎಎಲ್'ನ 29 ತಯಾರಿಕಾ ಘಟಕಗಳು, 9 ಜಂಟಿ ಸಹಭಾಗಿತ್ವ ಸಂಸ್ಥೆಗಳು, 10 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿ ಲೆಕ್ಕಪತ್ರ ಪರಿಶೋಧನೆ ನಡೆಸುತ್ತಿವೆ ಎಂದು ವಿವರಿಸಿದ್ದಾರೆ.ಎಚ್‌ಎಎಲ್‌ನ ಒಟ್ಟು 1.20 ಕೋಟಿ ಷೇರುಗಳನ್ನು ವಿಕ್ರಯಿಸುವ ಪ್ರಸ್ತಾವನೆಗೆ 2012ರ ನವೆಂಬರ್‌ನಲ್ಲಿಯೇ ಕೇಂದ್ರ ಸಚಿವ ಸಂಪುಟ ಅನುಮೋದನೆ        ನೀಡಿತ್ತು.

ಪ್ರತಿಕ್ರಿಯಿಸಿ (+)