ಗುರುವಾರ , ಜೂನ್ 24, 2021
23 °C

ಎಚ್‌ಕೆಇ: ಶೇ 96.38 ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಲ್ಲಿನ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ (ಎಚ್‌ಕೆಇ) ಸಂಸ್ಥೆ 2012-15ನೇಸಾಲಿನ ಆಡಳಿತ ಮಂಡಳಿಗೆ ಭಾನುವಾರ ನಡೆದ ಮತದಾನದಲ್ಲಿ ಶೇ. 96.38ರಷ್ಟು ಮತದಾನವಾಗಿದೆ.

ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಒಟ್ಟು 55 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.ಗುಲ್ಬರ್ಗದ ಪಿಡಿಎ ಎಂಜಿನಿಯರಿಂಗ್ ಕಾಲೇಜು, ಬೀದರ್‌ನ ಭೂಮರೆಡ್ಡಿ ಮಹಾವಿದ್ಯಾಲಯ ಹಾಗೂ ರಾಯಚೂರಿನ ಎಸ್.ಎಲ್.ಎನ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಒಟ್ಟು 1825 ಸದಸ್ಯರು ಮತ ಚಲಾಯಿಸುವ ಹಕ್ಕು ಹೊಂದಿದ್ದು, ವಿವಿಧ ಕಾರಣಗಳಿಂದಾಗಿ 27 ಸದಸ್ಯರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಿಲ್ಲ. ಉಳಿದಂತೆ 1733 ಸದಸ್ಯರು ಮತದಾನ ಮಾಡಿದರು.ಗುಲ್ಬರ್ಗದಲ್ಲಿ ಅತ್ಯಧಿಕ ಅಂದರೆ- 1622 ಮತದಾರರಿದ್ದು, ಈ ಪೈಕಿ 1556 ಸದಸ್ಯರು ಮತ ಚಲಾಯಿಸಿದರು.

ಉಳಿದಂತೆ ರಾಯಚೂರಿನಲ್ಲಿ ಎಲ್ಲ 94 ಸದಸ್ಯರೂ ಮತದಾನ ಮಾಡಿದರೆ, ಬೀದರ್‌ನಲ್ಲಿ 85 ಸದಸ್ಯರ ಪೈಕಿ 83 ಮಂದಿ ತಮ್ಮ ಹಕ್ಕು ಚಲಾಯಿಸಿದರು.ಸೋಮವಾರ (ಮಾರ್ಚ್ 19) ಬೆಳಿಗ್ಗೆ ಇಲ್ಲಿನ ಎಂ.ಆರ್.ಮೆಡಿಕಲ್ ಕಾಲೇಜಿನಲ್ಲಿ ಮತ ಎಣಿಕೆ ಆರಂಭವಾಗಲಿದ್ದು, ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.