ಎಚ್‌ಪಿಸಿಎಲ್ ಘಟಕ ಸ್ಫೋಟ: ಸಾವಿನ ಸಂಖ್ಯೆ 23ಕ್ಕೆ ಏರಿಕೆ

7

ಎಚ್‌ಪಿಸಿಎಲ್ ಘಟಕ ಸ್ಫೋಟ: ಸಾವಿನ ಸಂಖ್ಯೆ 23ಕ್ಕೆ ಏರಿಕೆ

Published:
Updated:

ಹೈದರಾಬಾದ್ (ಐಎಎನ್‌ಎಸ್): ವಿಶಾಖಪಟ್ಟಣದ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್)ನ ಶೀತಲೀಕರಣ ಘಟಕದಲ್ಲಿ ಆಗಸ್ಟ್ 23ರಂದು ಸಂಭವಿಸಿದ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ಭಾನುವಾರ ಮೃತಪಟ್ಟಿದ್ದಾರೆ.ಇದರಿಂದಾಗಿ ಘಟನೆಯಲ್ಲಿ ಸತ್ತವರ ಸಂಖ್ಯೆ 23ಕ್ಕೆ ಏರಿದೆ.ವಿಶಾಖಪಟ್ಟಣದಲ್ಲಿ ಮೂವರು ಹಾಗೂ ಮುಂಬೈನಲ್ಲಿ ದಾಖಲಾಗಿದ್ದ ಒಬ್ಬ ಗಾಯಾಳು ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಎಚ್‌ಪಿಸಿಎಲ್ ಮೂಲಗಳು ತಿಳಿಸಿವೆ. ಆ. 23ರಂದು ನಡೆದ ಈ ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry