ಎಚ್‌ಬಿಸಿ-ಗೃಹ ಖರೀದಿ

7

ಎಚ್‌ಬಿಸಿ-ಗೃಹ ಖರೀದಿ

Published:
Updated:

ಬೆಂಗಳೂರು:  ಮನೆ ಖರೀದಿಸುವ ವರು ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಪುಣೆಯ ಹೋಮ್ ಬೈಯರ್ಸ್  ಕಂಬೈನ್(ಎಚ್‌ಬಿಸಿ) `ಸಾಮೂಹಿಕ ಗೃಹ ಖರೀದಿ~ ಪರಿಕಲ್ಪನೆ  ಪ್ರಕಟಿಸಿದೆ.ನಗರದಲ್ಲಿ ಮನೆ ಖರೀದಿಸಲಿಚ್ಚಿಸುವವರು www.homebu yerscombine.com  ಗೆ ನೋಂದಾಯಿಸಿಕೊಂಡು ಶೇ 15-20ರಷ್ಟು ಹಣ ಉಳಿಸಬಹುದು. ಸಾಮೂಹಿಕವಾಗಿ ಗೃಹ ಖರೀದಿ ನಡೆಯುವುದರಿಂದ ಖರೀದಿದಾರರಿಗೆ ಹಣ ಉಳಿಯುತ್ತದೆ.  ಈ ಯೋಜನೆಗೆ ಭೂ ಸ್ವಾಧೀನ ಹಂತದಲ್ಲಿಯೇ ಹೂಡಿಕೆ ಮಾಡಬೇಕಾಗುತ್ತದೆ ಎಂದು ಕಂಪೆನಿಯ  ವ್ಯವಸ್ಥಾಪಕ ನಿರ್ದೇಶಕ ನಿತಿನ್ ಡಿಗಾಂನ್ಕೋರ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.ಬೆಂಗಳೂರಿನಲ್ಲಿ ವೆಂಕಟೇಶ್ವರ ಹೌಸಿಂಗ್ ಸಮೂಹದ ಜತೆ ಒಪ್ಪಂದವಾಗಿದೆ. ಗ್ರಾಹಕರಿಂದ ನಿವೇಶನ ಮೌಲ್ಯದ ಶೇ 0.5 ಮತ್ತು ನಿರ್ಮಾಣಗಾರರಿಂದ ಶೇ 2-4ರಷ್ಟು ಹಣವನ್ನು ಸೇವಾ ಶುಲ್ಕವಾಗಿ ಪಡೆಯುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry