ಶುಕ್ರವಾರ, ನವೆಂಬರ್ 22, 2019
20 °C
ಅಪಘಾತದಲ್ಲಿ ಎದೆಗೆ ಚುಚ್ಚಿದ ಸರಳು

ಎಚ್‌ಸಿಎಲ್ ಹಿರಿಯ ಅಧಿಕಾರಿ ಸಾವು

Published:
Updated:

ನೊಯಿಡಾ: ಪ್ರಮುಖ ಸಾಫ್ಟ್‌ವೇರ್ ಕಂಪೆನಿ ಎಚ್‌ಸಿಎಲ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಶ್ರೀವಾಸ್ತವ ಅವರು ಶುಕ್ರವಾರ ದೆಹಲಿ ಹೊರವಲಯದ ನೊಯಿಡಾ ಬಳಿ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ.ಸೆಕ್ಟರ್ 60ರಲ್ಲಿ ಅವರು ತಮ್ಮ ಐ-10 ಕಾರಿನಲ್ಲಿ ಹೋಗುವಾಗ ಈ ದುರಂತ ಸಂಭವಿಸಿತು. ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಾರು ದಿಢೀರನೆ ಪಕ್ಕಕ್ಕೆ ಹೊರಳಿ ಕಬ್ಬಿಣದ ಸರಳು ತುಂಬಿಕೊಂಡು ನಿಂತಿದ್ದ ಲಾರಿಗೆ ಹಿಂದಿನಿಂದ ಅಪ್ಪಳಿಸಿತು. ಆಗ ಸರಳುಗಳು ಕಾರಿನೊಳಗೆ ನುಗ್ಗಿದವು. ಸರಳು ಚುಚ್ಚಿ ತೀವ್ರ ಗಾಯಗೊಂಡ ಶ್ರೀವಾಸ್ತವ ಸ್ಥಳದಲ್ಲೇ ಮೃತಪಟ್ಟರು. ಕಾರಿನಲ್ಲಿದ್ದ ಒಬ್ಬರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ಮತ್ತೊಬ್ಬರಿಗೆ ತೀವ್ರ ಗಾಯಗಳಾಗಿವೆ.

ಪ್ರತಿಕ್ರಿಯಿಸಿ (+)