ಎಚ್‌ಸಿಜಿ ಆಸ್ಪತ್ರೆಯಲ್ಲಿ ಬೆಂಚ್ ಸರ್ಜರಿ

7

ಎಚ್‌ಸಿಜಿ ಆಸ್ಪತ್ರೆಯಲ್ಲಿ ಬೆಂಚ್ ಸರ್ಜರಿ

Published:
Updated:

ಬೆಂಗಳೂರು: ಬೆಂಚ್ ಸರ್ಜರಿ ಮೂಲಕ ಯಕೃತ್ತಿನ ಮರು ಜೋಡಣೆ ಶಸ್ತ್ರಚಿಕಿತ್ಸೆಯನ್ನು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ನಗರದ ಸಂಪಂಗಿರಾಮನಗರದ ಎಚ್‌ಸಿಜಿ ಆಸ್ಪತ್ರೆಯಲ್ಲಿ ಏ.24 ರಂದು ಯಕೃತ್ತಿನ ಶಸ್ತ್ರಚಿಕಿತ್ಸಾ ತಜ್ಞ ಡಾ.ಸಂಜಯ್ ಗೋವಿಲ್ ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ.ನಗರದ ತಿಮ್ಮೇಗೌಡ ಎಂಬ ರೋಗಿಯೊಬ್ಬರ ಯಕೃತ್ತಿನ ಭಾಗ ಹಾಗೂ ಹೃದಯದ ನಡುವೆ ಕ್ಯಾನ್ಸರ್‌ನ ಗಡ್ಡೆಯೊಂದು ಬೆಳೆದುಕೊಂಡಿತ್ತು. ಯಕೃತ್ತು ಇರುವಂತೆಯೇ ಗಡ್ಡೆ ತೆಗೆಯುವ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದರೆ ಹೆಚ್ಚಿನ ರಕ್ತ ಸ್ರಾವದಿಂದ ರೋಗಿಯ ಜೀವಕ್ಕೇ ಅಪಾಯವಾಗುವ ಸಾಧ್ಯತೆ ಇತ್ತು. ಹೀಗಾಗಿ ಯಕೃತ್ತನ್ನು ದೇಹದಿಂದ ಬೇರ್ಪಡಿಸಿ ಕ್ಯಾನ್ಸರ್ ಗಡ್ಡೆಯನ್ನು ಹೊರ ತೆಗೆದು, ಯಕೃತ್ತಿನ ಮರು ಜೋಡಣೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry