ಶುಕ್ರವಾರ, ನವೆಂಬರ್ 22, 2019
26 °C

ಎಚ್-1ಬಿ ವೀಸಾಗೆ 1.24ಲಕ್ಷ ಅರ್ಜಿ

Published:
Updated:

ವಾಷಿಂಗ್ಟನ್ (ಪಿಟಿಐ): ಅಮೆರಿಕದಲ್ಲಿ ವೃತ್ತಿ ಪರರಿಗೆ ನೀಡಲಾಗುವ ಎಚ್-1ಬಿ ವೀಸಾಕ್ಕೆ ಈ ವರ್ಷ 1.24 ಲಕ್ಷ ಅರ್ಜಿಗಳು ಬಂದಿದ್ದು, ಅರ್ಹ 85 ,000 ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆ ಏಪ್ರಿಲ್ 7ರಂದು ನಡೆಸಲಾಗಿದೆ ಎಂದು ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್) ಹೇಳಿದೆ.2013-14ರ ಆರ್ಥಿಕ ವರ್ಷಕ್ಕೆ ಎಚ್-1ಬಿ ವೀಸಾದ ಗರಿಷ್ಠ ಮಿತಿ 85,000. ಇದರಲ್ಲಿ 65,000 ವೀಸಾಗಳನ್ನು ವಿದೇಶದ ವೃತ್ತಿ ಪರರಿಗೆ ಹಾಗೂ 20,000 ವೀಸಾಗಳನ್ನು ಅಮೆರಿಕದಲ್ಲೇ ಶಿಕ್ಷಣ ಪಡೆದ ವಿದೇಶಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಪ್ರತಿಕ್ರಿಯಿಸಿ (+)