ಸೋಮವಾರ, ಜೂನ್ 14, 2021
26 °C

ಎ.ಜಿ ರಾಜೀನಾಮೆ ಪ್ರತಿಧ್ವನಿ: ಇಬ್ಬರು ವಕೀಲರ ಪದತ್ಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲ ವಿವಾದಗಳಿಗೆ ಸಂಬಂಧಿಸಿ  ರಾಜ್ಯ ಸರ್ಕಾರ ನೇಮಿಸಿದ್ದ ಇಬ್ಬರು ವಕೀಲರು ತಮ್ಮ ಸ್ಥಾನ­ಗಳಿಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.ದೆಹಲಿ ಮೂಲದ ನಿಶಾಂತ ಪಾಟೀಲ್‌ ಅವರನ್ನು ಕಾವೇರಿ ಜಲ ವಿವಾದ ಕುರಿತ ಪ್ರಕರಣಗಳನ್ನು ನೋಡಿ­ಕೊಳ್ಳಲು ರಾಜ್ಯ ಸರ್ಕಾರ ಇತ್ತೀಚೆಗೆ ನೇಮಕ ಮಾಡಿತ್ತು. ಅದೇ ರೀತಿ ಕನ್ನಡಿಗರೇ ಆದ ಶಶಿಕಿರಣ್‌ ಶೆಟ್ಟಿ ಅವರನ್ನು ಮಹಾದಾಯಿ, ಕಾವೇರಿ ಮತ್ತು ಕೃಷ್ಣಾ ಜಲ ವಿವಾದದ ಪ್ರಕರಣಗಳನ್ನು ನೋಡಿಕೊ­ಳ್ಳಲು ನೇಮಕ ಮಾಡಲಾಗಿತ್ತು.

ಈ ಇಬ್ಬರು ವಕೀಲರ ರಾಜೀನಾಮೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ. ಅಡ್ವೊಕೇಟ್‌ ಜನರಲ್‌ (ಎ.ಜಿ) ಪ್ರೊ ರವಿವರ್ಮ ಕುಮಾರ್‌ ಅವರು ಈ ವಕೀಲರ ನೇಮಕ ವಿಷಯದಲ್ಲಿ ಅಸಮಾಧಾನ­ಗೊಂಡು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಪ್ರೊ.ಕುಮಾರ್‌ ಅವರನ್ನು ಮನವೊಲಿಸುವ ಉದ್ದೇಶದಿಂದ ಈ ಇಬ್ಬರೂ ವಕೀಲರ ರಾಜೀನಾಮೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.ಪ್ರೊ. ಕುಮಾರ್‌ ಮನವೊಲಿಸಲು ಮುಖ್ಯಮಂತ್ರಿ ಸಿದ್ದ­ರಾ­­ಮಯ್ಯ ಮುಂದಾಗಿದ್ದಾರೆ. ಆದರೆ ರಾಜೀನಾಮೆ ಹಿಂಪಡೆಯುವ ಕುರಿತು ಪ್ರೊ. ಕುಮಾರ್‌ ಯಾವುದೇ ನಿರ್ಧಾರ ಕೈಗೊಂಡಿಲ್ಲ.‘ನಾನು ರಾಜೀನಾಮೆ ನೀಡಿರುವುದು ನಿಜ. ಈಗ ಚೆಂಡು ಸರ್ಕಾರದ ಅಂಗಳದಲ್ಲಿದೆ. ಸಿದ್ದರಾಮಯ್ಯ ಅವರು ನನ್ನನ್ನು ಸಂಪರ್ಕಿಸಿದ್ದಾರೆ. ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ನೋಡೋಣ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.