ಮಂಗಳವಾರ, ಜನವರಿ 21, 2020
28 °C

ಎಟಿಎಂಗಳ ಸುರಕ್ಷತೆ ಸಾಧ್ಯ

–ಎಚ್‌.ಬಿ. ಮೇಟಿ. ಜಂಗಮುರಾಳ,ಮುದ್ದೇಬಿಹಾಳ. Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಎ.ಟಿ.ಎಂ. ಘಟಕವೊಂದ­ರಲ್ಲಿ  ಮಹಿಳೆಯ ಮೇಲೆ ನಡೆದ ಹಲ್ಲೆ ಇಡೀ ದೇಶ­ವನ್ನೇ ಬೆಚ್ಚಿ­ಬೀಳಿಸಿದೆ. ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಿದ ಮಾತ್ರಕ್ಕೆ ಇಂತಹ ಪ್ರಕರಣ ತಡೆಯಲು ಸಾಧ್ಯವಿಲ್ಲ.ಈ ಹಲ್ಲೆ ನಡೆದದ್ದು ಜನನಿಬಿಡ ಪ್ರದೇಶದ ಬೆಂಗಳೂರಿನ ಹೃದಯ ಭಾಗದಲ್ಲಿ. ಜ್ಯೋತಿ ಅವರು ಎಟಿಎಂ ಕೇಂದ್ರದ ಒಳಗೆ ಪ್ರವೇಶಿಸಿ­ದಾಕ್ಷಣ ಹಲ್ಲೆ ನಡೆಸಿದವ ಒಳನುಗ್ಗಿ ಷಟರ್ ಎಳೆಯುತ್ತಾನೆ. ಏರಿಸಿದ ಷಟರ್‌ ಬೇರೆಯವ­ರಿಗೆ ಇಳಿಸಲು ಬಾರದಂತೆ; ಕೆಳಗಡೆ ಯಾವ ರೀತಿ ಲಾಕ್‌ ಮಾಡುತ್ತಾರೋ ಮೇಲೆಯೂ ಅದೇ ರೀತಿ ಲಾಕ್‌ ಅಳವಡಿಸಬೇಕು.

ಸಂಬಂಧಪಟ್ಟ­ವರೇ ಕೀಲಿ ತೆಗೆದು ಅದನ್ನು ಇಳಿಸುವಂತಿರಬೇಕು.  ಎಟಿಎಂ ಕೊಠಡಿಗಳಿಗೆ ಪಾರದರ್ಶಕ ಗಾಜು ಅಳವಡಿಸಿದ್ದರೆ ಈ ಅವಘಡ  ತಪ್ಪಿಸಬಹುದಿತ್ತು.

–ಎಚ್‌.ಬಿ. ಮೇಟಿ. ಜಂಗಮುರಾಳ, ಮುದ್ದೇಬಿಹಾಳ.

ಪ್ರತಿಕ್ರಿಯಿಸಿ (+)