ಎಟಿಎಂ ನಗದು ಸಾಗಣೆ: ` 49 ಲಕ್ಷ ಹಣದೊಂದಿಗೆ ಚಾಲಕ ಪರಾರಿ!

7

ಎಟಿಎಂ ನಗದು ಸಾಗಣೆ: ` 49 ಲಕ್ಷ ಹಣದೊಂದಿಗೆ ಚಾಲಕ ಪರಾರಿ!

Published:
Updated:

ನವದೆಹಲಿ (ಐಎಎನ್‌ಎಸ್‌)): ಎಟಿಎಂ ನಗದು ಹಣ ಸಾಗಣೆ ವ್ಯಾನ್‌ ಚಾಲಕ `49 ಲಕ್ಷ ಹಣದೊಂದಿಗೆ ಪರಾರಿ ಯಾದ ಘಟನೆ ರಾಜಧಾನಿಯಲ್ಲಿ ನಡೆ ದಿರುವುದಾಗಿ ಪೊಲೀಸರು ಹೇಳಿದ್ದಾರೆ.ಆರೋಪಿಯನ್ನು  ಸಂಜಯ್‌ (30) ಎಂದು ಗುರುತಿಸಲಾಗಿದೆ. ಬುಧವಾರ ಬೆಳಿಗ್ಗೆ 10.50ರ ಸುಮಾರಿಗೆ ಕರೋಲ್‌ ಬಾಗ್‌ನಲ್ಲಿನ ಪದಂ ಸಿಂಗ್‌ ರಸ್ತೆಯಲ್ಲಿರುವ ಎಟಿಎಂಗೆ ` 29 ಲಕ್ಷ ಹಣ ತುಂಬಲು ಹೋದಾಗ ಈ ಘಟನೆ ನಡೆದಿದೆ.  ತನ್ನೊಂದಿಗೆ ಇದ್ದ ಸಹೋ ದ್ಯೋಗಿಗಳು ಎಟಿಎಂ ಯಂತ್ರಕ್ಕೆ ಹಣ ತುಂಬುತ್ತಿದ್ದಾಗ ಈತ, ವ್ಯಾನ್‌ನಲ್ಲಿದ್ದ ` 49 ಲಕ್ಷ ಹಣದೊಂದಿಗೆ  ಪರಾರಿ ಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಆಗಸ್ಟ್‌ 31ರಂದು ಕೆಲಸಕ್ಕೆ ಸೇರಿದ್ದ  ಈತ ನಕಲಿ ವಿಳಾಸ ನೀಡಿದ್ದ ಎನ್ನುವುದೂ ಬೆಳಕಿಗೆ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry