ಎಟಿಪಿ ಓಪನ್ ಟೆನಿಸ್ ಟೂರ್ನಿ: ಎಂಟರಘಟ್ಟಕ್ಕೆ ಸೋಮ್-ಮಾರ್ಟಿನ್

7

ಎಟಿಪಿ ಓಪನ್ ಟೆನಿಸ್ ಟೂರ್ನಿ: ಎಂಟರಘಟ್ಟಕ್ಕೆ ಸೋಮ್-ಮಾರ್ಟಿನ್

Published:
Updated:

ಜೋಹಾನ್ಸ್‌ಬರ್ಗ್ (ಪಿಟಿಐ):  ಭಾರ ತದ ಸೋಮ್‌ದೇವ್ ದೇವವರ್ಮನ್ ಹಾಗೂ ಅಮೆರಿಕದ ಡೇವಿಡ್ ಮಾರ್ಟಿನ್ ಅವರು ಇಲ್ಲಿ ನಡೆಯುತ್ತಿ ರುವ ದಕ್ಷಿಣ ಆಫ್ರಿಕಾ ಎಟಿಪಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಎಂಟರಘಟ್ಟಕ್ಕೆ ಪ್ರವೇಶಿಸಿದ್ದಾರೆ.ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಸೋಮ್ ಹಾಗೂ ಮಾರ್ಟಿನ್ ಜೋಡಿ 6-3, 6-4ರಲ್ಲಿ ಅಸ್ಟ್ರೀಯಾದ ಮಾರ್ಟಿನ್ ಫಿಚರ್ ಹಾಗೂ ಜರ್ಮ ನಿಯ ರೈನೆರ್ ಸ್ಕೇಲ್ಟರ್ ಜೋಡಿ ಯನ್ನು ಮಣಿಸಿ ಎಂಟರ ಘಟ್ಟಕ್ಕೆ ಪ್ರವೇಶಿಸಿತು.ಎರಡೂ ಸೆಟ್‌ಗಳಲ್ಲಿ ಸೋಮ್- ಮಾರ್ಟಿನ್ ಜೋಡಿಗೆ ಎದುರಾಳಿ ಆಟಗಾರರು ಕೊಂಚ ಮಟ್ಟಿಗೆ ಪ್ರತಿರೋಧ ತೋರಿದರಾದರೂ, ಉತ್ತಮ ಸರ್ವ್‌ಗಳ ಮೂಲಕ ಈ ಜೋಡಿ ಗೆಲುವು ಪಡೆಯುವಲ್ಲಿ ಯಶಸ್ಸು ಕಂಡಿತು.ಮೊದಲ ಸೆಟ್‌ನಲ್ಲಿ ಅಲ್ಪ ಪೈಪೋಟಿ ತೋರಿದ ಮಾರ್ಟಿನ್ ಫಿಚರ್ ಹಾಗೂ ರೈನೆರ್ ಸ್ಕೇಲ್ಟರ್ ಜೋಡಿ ಪಂದ್ಯವನ್ನು ಕೈವಶ ಮಾಡಿಕೊಳ್ಳಬೇಕು ಎಂದು ಎರಡನೇ ಸೆಟ್‌ನಲ್ಲಿ ಪ್ರಬಲ ಪ್ರದರ್ಶನ ತೋರಿದರು. ಆದರೂ ಅವರ ಪ್ರಯತ್ನ ಯಶ ಕಾಣಲಿಲ್ಲ.ಎಂಟರ ಘಟ್ಟದ ಪಂದ್ಯದಲ್ಲಿ ಸೋಮ್-ಮಾರ್ಟಿನ್ ಜೋಡಿ ಸ್ಲೋವಾಕಿಯಾದ ಕಾರೋ ಬ್ಯಾಕ್ ಹಾಗೂ ಇಸ್ರೇಲ್‌ನ ದುಬಿ ಸೆಲಾ ಜೋಡಿಯ ಸವಾಲನ್ನು ಎದುರಿಸ ಲಿದ್ದಾರೆ.ಮೊದಲ ಸುತ್ತಿನ ಪಂದ್ಯದಲ್ಲಿ ಬ್ಯಾಕ್ ಹಾಗೂ ಸೆಲಾ ಜೋಡಿ ಜರ್ಮನಿಯ ಡುಸ್ಟಿನ್ ಬ್ರೌನ್-ರೋಜಿಯರ್ ವಾಸನ್ ಜೋಡಿ ಎದುರು  ಗೆಲುವು ಪಡೆದು ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಭಾರತದ ಸೋಮ್‌ದೇವ್ ಈಗಾಗಲೇ ಸಿಂಗಲ್ಸ್ ನಲಿಯೂ ಎಂಟರಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ. ಅವರು ಬುಧವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ರಿಕ್ ದೆ ವೊಯಿಸ್ಟ್ ಅವರನ್ನು ಮಣಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry