ಎಟಿಪಿ ಟೆನಿಸ್ : ಎರಡನೇ ಸುತ್ತಿಗೆ ಸೋಮದೇವ್

7

ಎಟಿಪಿ ಟೆನಿಸ್ : ಎರಡನೇ ಸುತ್ತಿಗೆ ಸೋಮದೇವ್

Published:
Updated:

ಸಿಡ್ನಿ(ಪಿಟಿಐ): ಭಾರತದ ಸೋಮದೇವ್‌ ದೇವವರ್ಮನ್  ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎಟಿಪಿ ಅಪಿಯಾ ಅಂತರರಾಷ್ಟ್ರೀಯ ಅರ್ಹತಾ ಟೂರ್ನಿಯ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ 90ನೇ ಸ್ಥಾನ ಹೊಂದಿರುವ ಸೋಮದೇವ್ ಶನಿವಾರ ನಡೆದ ಪಂದ್ಯದಲ್ಲಿ 6–2, 2–6, 6–4 ರಲ್ಲಿ ಬೆಲ್ಜಿಯಂನ ನೀಲ್ ಡೇಸೀನ್‌ ವಿರುದ್ಧ ಜಯ ಗಳಿಸಿದರು. ಕಠಿಣ ಪೈಪೋಟಿಯಿಂದ ಕೂಡಿದ್ದ ಈ ಹೋರಾಟ 43 ನಿಮಿಷಗಳಿಂದ ಕೂಡಿತ್ತು. ಎರಡನೇ ಸೆಟ್‌ನಲ್ಲಿ ಸೋತ ಅವರು ನಂತರ ತಿರುಗೇಟು ನೀಡಿದರು.

ಟೂರ್ನಿಯ ಡಬಲ್ಸ್‌ ವಿಭಾಗ ದಲ್ಲಿ ಭಾರತದ ಲಿಯಾಂಡರ್‌ ಪೇಸ್, ಜೆಕ್‌ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಜೊತೆಗೂಡಿ ಹಾಗೂ ರೋಹನ್‌ ಬೋಪಣ್ಣ, ಪಾಕಿಸ್ತಾನದ ಐಸಾಮ್‌ ಉಲ್‌ಹಕ್‌ ಖುರೇಷಿ ಜೊತೆ ಸೇರಿ ಸ್ಪರ್ಧೆ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry