ಭಾನುವಾರ, ಜೂನ್ 13, 2021
21 °C

ಎಟಿಪಿ ಟೆನಿಸ್ ಟೂರ್ನಿ: ಪೇಸ್-ರಾಡೆಕ್ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಯಾಮಿ (ಪಿಟಿಐ): ಹೊಂದಾಣಿಕೆಯ ಆಟವಾಡಿದ ಭಾರತದ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಅವರು ಇಲ್ಲಿ ನಡೆಯುತ್ತಿರುವ ಮಿಯಾಮಿ ಮಾಸ್ಟರ್ಸ್ ಎಟಿಪಿ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದರು.ಏಳನೇ ಶ್ರೇಯಾಂಕ ಹೊಂದಿರುವ ಭಾರತ-ಜೆಕ್ ಜೋಡಿಯು ಮೂವತ್ತು ಲಕ್ಷ ಡಾಲರ್ ಬಹುಮಾನ ಮೊತ್ತದ ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರಿ ಕಷ್ಟಪಡುವ ಅಗತ್ಯ ಎದುರಾಗಲಿಲ್ಲ.ವಿಶ್ವಾಸಪೂರ್ಣ ಸರ್ವ್ ಹಾಗೂ ರಿಟರ್ನ್‌ಗಳಿಂದ ಪ್ರಾಬಲ್ಯ ಮೆರೆದ ಪೇಸ್ ಮತ್ತು ರಾಡೆಕ್ ಅವರು  6-2, 6-7 (3)ರಲ್ಲಿ ಸೈಪ್ರಸ್‌ನ ಮಾರ್ಕೊಸ್ ಬಗ್ದಾಟಿಸ್ ಹಾಗೂ ಅಮೆರಿಕಾದ ಸ್ಯಾಮ್ ಕ್ಯೂರ‌್ರೆ ವಿರುದ್ಧ ಗೆಲುವು ಸಾಧಿಸಿದರು. ಹಾರ್ಡ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಈ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಪೇಸ್-ಸ್ಟೆಪನೆಕ್ ಮುಂದಿನ ಸುತ್ತಿನಲ್ಲಿ ಇಂಗ್ಲೆಂಡ್‌ನ ಕಾಲಿನ್ ಫ್ಲೆಮಿಂಗ್ ಹಾಗೂ ರಾಸ್ ಹಚಿನ್ಸ್ ಎದುರು ಯಶಸ್ಸು ಪಡೆಯಬೇಕು.ಭಾರತದ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಕೂಡ ಆಡುತ್ತಿದ್ದಾರೆ. ಅವರು ತಮ್ಮ ಮೊದಲ ಪಂದ್ಯದಲ್ಲಿ ಆಸ್ಟ್ರಿಯಾದ ಜರ್ಗೆನ್ ಮೆಲ್ಜರ್ ಹಾಗೂ ಇಂಗ್ಲೆಂಡ್‌ನ ಜ್ಯಾಮಿ ಮುರ‌್ರೆ ಎದುರಿಸುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.