ಎಟಿಪಿ ಟೆನಿಸ್ ಟೂರ್ನಿ: ಸೋಮ್-ಮಾರ್ಟಿನ್‌ಗೆ ನಿರಾಸೆ

7

ಎಟಿಪಿ ಟೆನಿಸ್ ಟೂರ್ನಿ: ಸೋಮ್-ಮಾರ್ಟಿನ್‌ಗೆ ನಿರಾಸೆ

Published:
Updated:

ಜೋಹಾನ್ಸ್‌ಬರ್ಗ್ (ಪಿಟಿಐ):  ಸೋಮ್‌ದೇವ್ ದೇವವರ್ಮನ್ ಹಾಗೂ ಡೇವಿಡ್ ಮಾರ್ಟಿನ್ ಅವರು ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕ ಎಟಿಪಿ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿದರು.ಶುಕ್ರವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ‘ಇಂಡೋ ಅಮೆರಿಕನ್’ ಸೋಮ್ ಹಾಗೂ ಮಾರ್ಟಿನ್ ಜೋಡಿ 7-6, 3-6, 10-12ರಲ್ಲಿ ಸ್ಲೋವಾಕಿಯಾದ ಕಾರೋಲ್ ಬೇಕ್ ಹಾಗೂ ಇಸ್ರೇಲ್‌ನ ದುಬಿ ಸೆಲಾ ಜೋಡಿ ವಿರುದ್ಧ ಪರಾಭವ ಗೊಂಡರು.ಮೊದಲ ಸೆಟ್‌ನಲ್ಲಿ ರೋಚಕ ಗೆಲುವು ಸಾಧಿಸಿದ್ದ ಸೋಮ್- ಮಾರ್ಟಿನ್ ಜೋಡಿ ಎರಡನೇ ಸೆಟ್‌ನಲ್ಲಿ ಎದುರಾಳಿ ಬೇಕ್ ಹಾಗೂ ಸೆಲಾ ಜೋಡಿಗೆ ಶರಣಾಯಿತು. ಆದರೆ ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಮತ್ತೆ ಚೇತರಿಸಿಕೊಂಡು ಪ್ರಬಲ ಪ್ರತಿರೋಧ ಒಡ್ಡಿತು.ಆದರೆ ಕೊನೆಯಲ್ಲಿ ಬೇಕ್ ಹಾಗೂ ಸೆಲಾ ಕೆಲ ಉತ್ತಮ ಸರ್ವ್‌ಗಳ ಮೂಲಕ ಗೆಲುವನ್ನು ತಮ್ಮದಾಗಿಸಿ ಕೊಂಡು ಸೆಮಿಫೈನಲ್‌ಗೆ ಪ್ರವೇಶಿಸಿತು.ಭಾರತದ ಸೋಮ್‌ದೇವ್ ದೇವ ವರ್ಮನ್ ಸಿಂಗಲ್ಸ್‌ನಲ್ಲಿ ಈಗಾಗಲೇ ಕ್ವಾರ್ಟರ್‌ಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ. ಅಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾದ ರಿಕ್ ದೇ ವೋಯಿಸ್ಟ್ ಅವರ ಸವಾಲನ್ನು ಎದುರಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry