ಎಟಿಪಿ ರ‌್ಯಾಂಕಿಂಗ್: ಬೋಪಣ್ಣ ಶ್ರೇಷ್ಠ ಸಾಧನೆ ಕುಸಿದ ಸಾನಿಯಾ...

ಸೋಮವಾರ, ಜೂಲೈ 22, 2019
26 °C

ಎಟಿಪಿ ರ‌್ಯಾಂಕಿಂಗ್: ಬೋಪಣ್ಣ ಶ್ರೇಷ್ಠ ಸಾಧನೆ ಕುಸಿದ ಸಾನಿಯಾ...

Published:
Updated:

ನವದೆಹಲಿ (ಪಿಟಿಐ):  ಭಾರತದ ರೋಹನ್ ಬೋಪಣ್ಣ ಎಟಿಪಿ ರ‌್ಯಾಂಕಿಂಗ್ ಪಟ್ಟಿಯ ಡಬಲ್ಸ್‌ನಲ್ಲಿ ವೃತ್ತಿ ಜೀವನದ ಶ್ರೇಷ್ಠ ಸಾಧನೆಯ ಶ್ರೇಯಕ್ಕೆ ಪಾತ್ರರಾಗಿದ್ದಾರೆ.ಬುಧವಾರ ಎಟಿಪಿ ರ‌್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಒಂಬತ್ತನೇ ಸ್ಥಾನ ಪಡೆದಿದ್ದಾರೆ.ಅವರು ಒಟ್ಟು 29 ಟೂರ್ನಿಗಳಿಂದ 4,420ಪಾಯಿಂಟ್ ಕಲೆ ಹಾಕಿದ್ದಾರೆ. ಅವರ ಈ ಸಾಧನೆಗೆ  ಜರ್ಮನಿಯಲ್ಲಿ ನಡೆದ ಗೆರಿ ವೆಬರ್ ಓಪನ್ ಟೆನಿಸ್ ಟೂರ್ನಿಯು ನೆರವಾಗಿದೆ. ಏಕೆಂದರೆ. ಬೋಪಣ್ಣ ಹಾಗೂ ಖುರೇಷಿ ಜೋಡಿ ಈ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿತ್ತು.ಈ ಜೋಡಿ ಡಬಲ್ಸ್‌ನ ತಂಡ ವಿಭಾಗದ ರ‌್ಯಾಂಕಿಂಗ್‌ನಲ್ಲಿ ಐದನೇ ಸ್ಥಾನ ಪಡೆದಿದೆ. ಒಟ್ಟು 13ಟೂರ್ನಿಗಳಿಂದ 2185ಪಾಯಿಂಟ್ ಗಳಿಸಿದೆ. ಈ ಜೋಡಿ ಮೊದಲು ಆರನೇ ಸ್ಥಾನದಲ್ಲಿತ್ತುಇತ್ತೀಚಿಗೆ ಕೊನೆಗೊಂಡ ಏಜೊನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಜೋಡಿ ಹತ್ತನೇ ಸ್ಥಾನ ಪಡೆದುಕೊಂಡಿದೆ. ಈ ಜೋಡಿ 18 ಟೂರ್ನಿಗಳಿಂದ 4300ಪಾಯಿಂಟ್‌ಗಳನ್ನು ಗಳಿಸಿದೆ.ಮೊದಲಿನಿಂದಲೂ ಅಗ್ರ ಸ್ಥಾನದಲ್ಲಿದ್ದ ಅಮೆರಿಕದ ಬಾಬ್ ಹಾಗೂ ಮೈಕ್ ಬ್ರಯಾನ್ ಜೋಡಿ ಈ ಸಲವು 12,110ಪಾಯಿಂಟ್ ಗಳಿಸಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಲಂಡನ್‌ನಲ್ಲಿ ನಡೆದ ಏಜೊನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಈ ಜೋಡಿ ಅದೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಎಟಿಪಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಸೋಮ್‌ದೇವ್ ದೇವವರ್ಮನ್ 68ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು 28 ಟೂರ್ನಿಗಳಿಂದ ಕೇವಲ 724ಪಾಯಿಂಟ್‌ಗಳನ್ನು ಮಾತ್ರ ಕಲೆ ಹಾಕಿದ್ದಾರೆ.ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆದ ರಫೆಲ್ ನಡಾಲ್ ಸಿಂಗಲ್ಸ್‌ನಲ್ಲಿ ಅಗ್ರ ರ‌್ಯಾಂಕಿಂಗ್ ಹೊಂದಿದ್ದಾರೆ. ಅವರು 22 ಟೂರ್ನಿಗಳಿಂದ 12,070ಪಾಯಿಂಟ್ ಗಳಿಸಿದ್ದಾರೆ.ಸಿಂಗಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಕುಸಿತ: ಡಬ್ಲ್ಯುಟಿಎ ರ‌್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಆಟಗಾರ್ತಿ ಸಾನಿಯಾ ಮಿರ್ಜಾ ಸಿಂಗಲ್ಸ್‌ನಲ್ಲಿ ಎರಡು ಸ್ಥಾನಗಳಲ್ಲಿ ಕುಸಿತ ಕಂಡಿದ್ದಾರೆ. ಸಾನಿಯಾ ಈ ಮೊದಲು 58ನೇ ಸ್ಥಾನದಲ್ಲಿದ್ದರು. ಈಗ 60ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. 26 ಟೂರ್ನಿಗಳಿಂದ 997 ಪಾಯಿಂಟ್‌ಗಳನ್ನು ಅವರು ಹೊಂದಿದ್ದಾರೆ.ಆದರೆ, ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ ರನ್ನರ್ ಅಪ್ ಆದ ಭಾರತದ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಈ ಸಲವು ತಮ್ಮ 14ನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಡಬ್ಲ್ಯುಟಿಎ ರ‌್ಯಾಂಕಿಂಗ್ ಪಟ್ಟಿಯಲ್ಲಿಯು ಈ ಜೋಡಿ ಮೂರನೇ ಸ್ಥಾನದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry