ಎಟಿಪಿ ರ‌್ಯಾಂಕಿಂಗ್: ಯೂಕಿ ಭಾಂಬ್ರಿಗೆ 297ನೇ ಸ್ಥಾನ

7

ಎಟಿಪಿ ರ‌್ಯಾಂಕಿಂಗ್: ಯೂಕಿ ಭಾಂಬ್ರಿಗೆ 297ನೇ ಸ್ಥಾನ

Published:
Updated:

ನವದೆಹಲಿ (ಪಿಟಿಐ): ಭಾರತದ ಯುವ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಎಟಿಪಿ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಬಾರಿಗೆ ಅಗ್ರ 300ರ ಒಳಗೆ ಕಾಣಿಸಿಕೊಂಡಿದ್ದಾರೆ. ನೂತನ ಪಟ್ಟಿಯಲ್ಲಿ ಅವರಿಗೆ 297ನೇ ಸ್ಥಾನ ಲಭಿಸಿದೆ.ಮುಂದಿನ ವಾರ ಬಿಡುಗಡೆಯಾಗಲಿರುವ ರ‌್ಯಾಂಕಿಂಗ್ ಪಟ್ಟಿಯಲ್ಲಿ ಅವರು ಮತ್ತೆ ಏಳು ಸ್ಥಾನಗಳಷ್ಟು ಮೇಲಕ್ಕೇರಲಿದ್ದಾರೆ. ಅಮೆರಿಕದ ಸಾನ್‌ಜೋಸ್‌ನಲ್ಲಿ ನಡೆಯುತ್ತಿರುವ ಎಸ್‌ಎಪಿ ಓಪನ್ ಟೂರ್ನಿಯ ಅರ್ಹತಾ ಹಂತದ ಎರಡು ಪಂದ್ಯಗಳಲ್ಲಿ ಗೆಲುವು ಪಡೆದದ್ದು ಇದಕ್ಕೆ ಕಾರಣ. ಆದರೆ ಸೋಮವಾರ ನಡೆದ ಅರ್ಹತಾ ಹಂತದ ಕೊನೆಯ ಪಂದ್ಯದಲ್ಲಿ ಯೂಕಿ 4-6, 4-6 ರಲ್ಲಿ ಅಮೆರಿಕದ ಡೆನಿಸ್ ಲಜೋಲಾ ಎದುರು ಸೋಲು ಅನುಭವಿಸಿದ್ದರು.ಭಾರತದ ಇನ್ನೊಬ್ಬ ಆಟಗಾರ ಸೋಮದೇವ್ ದೇವವರ್ಮನ್ 120ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಭುಜದ ನೋವಿನ ಕಾರಣ ಅವರು ಚೆನ್ನೈ ಓಪನ್ ಮತ್ತು ಆಸ್ಟ್ರೇಲಿಯಾ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದರು.ಡಬಲ್ಸ್ ವಿಭಾಗದ ರ‌್ಯಾಂಕಿಂಗ್‌ನಲ್ಲಿ ಲಿಯಾಂಡರ್ ಪೇಸ್ (7) ಮತ್ತು ರೋಹನ್ ಬೋಪಣ್ಣ (11) ಈ ಹಿಂದಿನ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ಮಹೇಶ್ ಭೂಪತಿ ಒಂದು ಕ್ರಮಾಂಕ ಮೇಲಕ್ಕೇರಿ 15ನೇ ಸ್ಥಾನ ಪಡೆದಿದ್ದಾರೆ. ಸಾನಿಯಾ ಮಿರ್ಜಾ ಡಬಲ್ಸ್ ವಿಭಾಗದಲ್ಲಿ ಏಳನೇ ರ‌್ಯಾಂಕ್ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry