ಎಡೆಲೆ ಹೊಸ ಹಾಡು

7

ಎಡೆಲೆ ಹೊಸ ಹಾಡು

Published:
Updated:
ಎಡೆಲೆ ಹೊಸ ಹಾಡು

ಗ್ರ್ಯಾಮ್ಮಿ ಪ್ರಶಸ್ತಿ ವಿಜೇತ ಗಾಯಕಿ ಎಡೆಲೆ `ಸ್ಕೈಫಾಲ್~ ಚಿತ್ರಕ್ಕಾಗಿ ಹಾಡಿರುವ ಥೀಮ್ ಸಾಂಗ್ ಅ.5ರಂದು ಬಿಡುಗಡೆಗೊಳ್ಳಲಿದೆ. ಜೇಮ್ಸ ಬಾಂಡ್ ಅಭಿನಯದ ಮುಂಬರುವ ಚಿತ್ರ ಸ್ಕೈಫಾಲ್. ಈ ಚಿತ್ರಕ್ಕೆ ಥೀಮ್‌ಸಾಂಗ್ ಹಾಡುವ ಮುನ್ನ ಎಡೆಲೆ ಸಾಕಷ್ಟು ಭಾವೋದ್ವೇಗಕ್ಕೆ ಒಳಗಾಗಿದ್ದರಂತೆ. ಅವರ ಮನಸ್ಸು ಕೊಂಚ ಡೋಲಾಯಾಮಾನ ಸ್ಥಿತಿ ತಲುಪಿತ್ತಂತೆ.`ಬಾಂಡ್ ಸಿನಿಮಾ ಆಗಿದ್ದರಿಂದ ಸಹಜವಾಗಿಯೇ ಉದ್ವೇಗಕ್ಕೆ ಒಳಗಾಗಿದ್ದೆ. ಗೀತೆ ಚೆನ್ನಾಗಿ ಬರಬೇಕು ಎಂಬ ಉದ್ದೇಶ ಮನಸ್ಸಿನೊಳಗೆ ಇದ್ದಿದ್ದರಿಂದ ಸಾಕಷ್ಟು ಒತ್ತಡವನ್ನೂ ಅನುಭವಿಸಿದೆ.  ನಂತರದಲ್ಲಿ ಇವೆಲ್ಲವನ್ನೂ ಸಾವರಿಸಿಕೊಂಡು ಗೀತೆಯನ್ನು ಅನುಭವಿಸುತ್ತಾ ಹಾಡಿದೆ~ ಎಂದು ಖುಷಿಯಿಂದ ಹೇಳುತ್ತಿದ್ದಾರೆ ಎಡೆಲೆ. ಅಂದಹಾಗೆ, ಎಡೆಲೆ ಸಂಗೀತಗಾರ ಪಾಲ್ ಎಪ್‌ವರ್ಥ್ ಅವರೊಂದಿಗೆ ಕೂಡಿ ಈ ಗೀತೆಯನ್ನು ಹಾಡಿದ್ದಾರೆ.`ಸ್ಕೈಫಾಲ್ ಚಿತ್ರದ ಥೀಮ್‌ಸಾಂಗ್‌ನ ಸಾಹಿತ್ಯ ಹಾಗೂ ಪಾಲ್ ಅವರನ್ನು ನಾನು ತುಂಬಾ ಇಷ್ಟಪಡುತ್ತೇನೆ. ಈ ಗೀತೆ ಅದ್ಭುತವಾಗಿ ಮೂಡಿಬರಲು ಪಾಲ್ ಕೆಲವು ಟಿಪ್ಸ್ ನೀಡಿದ್ದಾರೆ. ಈ ಗೀತೆಯನ್ನು ರೆಕಾರ್ಡಿಂಗ್ ಮಾಡುವಾಗ ಆದ ಅನುಭವ ನನ್ನ ಜೀವನದಲ್ಲೇ ಮರೆಯಲಾಗದಂಥದ್ದು~ ಎನ್ನುತ್ತಿದ್ದಾರೆ 24 ವರ್ಷದ ಯವ ಗಾಯಕಿ.ಸ್ಕೈಫಾಲ್ ಚಿತ್ರದ ಈ ಗೀತೆಯನ್ನು ಲಂಡನ್‌ನ ಅಬ್ಬೆ ರೋಡ್ ಸ್ಟುಡಿಯೋಸ್‌ನಲ್ಲಿ ರೆಕಾರ್ಡ್ ಮಾಡಲಾಗಿದೆಯಂತೆ. ನಟ ಡೇನಿಯಲ್ ಈ ಚಿತ್ರದಲ್ಲಿ ಬ್ರಿಟಿಷ್ ಸೂಪರ್ ಸ್ಪೈ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅ.26ಕ್ಕೆ ಬ್ರಿಟನ್‌ನಲ್ಲಿ ತೆರೆಕಾಣಲಿರುವ ಸ್ಕೈಫಾಲ್ ಚಿತ್ರ ನವೆಂಬರ್ 2ಕ್ಕೆ ಭಾರತದಲ್ಲಿ ಹಾಗೂ ನವೆಂಬರ್ 9ಕ್ಕೆ ಅಮೆರಿಕದಲ್ಲಿ ತೆರೆಕಾಣಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry