ಮಂಗಳವಾರ, ಮೇ 11, 2021
21 °C

ಎಣ್ಣೆಯ ಮರ್ಮ ತಿಳಿಸಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರುಕಟ್ಟೆಯಲ್ಲಿ ದೊರೆಯುವ ಶೇಂಗಾ ಬೆಲೆ ಕೆಜಿಗೆ ರೂ. 85. ಒಂದು ಲೀಟರ್ ಖಾದ್ಯ ತೈಲ ತಯಾರಿಸಲು ಮೂರುವರೆ ಕೆಜಿಯಷ್ಟು ಶೇಂಗಾ ಬೇಕಾಗುತ್ತದೆ. ಅಂದರೆ ಒಂದು ಲೀಟರ್ ಶೇಂಗಾ ಎಣ್ಣೆ ತಯಾರಿಸಲು ಬಳಸುವ ಶೇಂಗಾ ಬೆಲೆಯೇ (ಇತರೆ ಖರ್ಚುಗಳನ್ನು ಬಿಟ್ಟು) ರೂ. 300ಆಗುತ್ತದೆ.ಆದರೆ, ಮಾರುಕಟ್ಟೆಯಲ್ಲಿ ದೊರೆಯುವ ಶೇಂಗಾಎಣ್ಣೆ ಬೆಲೆ ಲೀಟರ್‌ಗೆ ರೂ.90ರಿಂದ 130 ವರೆಗೆ ಇದೆ. ಇದು ಹೇಗೆ ಸಾಧ್ಯ?ಇಂದಿನ ಬಹುತೇಕ ಆರೋಗ್ಯದ ಸಮಸ್ಯೆಗಳಿಗೆ ಖಾದ್ಯ ತೈಲವೂ ಒಂದು ಪ್ರಮುಖ ಕಾರಣ. ಇದು ಕೇವಲ ಶೇಂಗಾ ಎಣ್ಣೆಯ ಉದಾಹರಣೆ ಮಾತ್ರ. ಇತರೆ ಎಣ್ಣೆಗಳಲ್ಲೂ ಈ ರೀತಿಯ ಬೆಲೆಯ ಅಂತರ ಇದೆ.ಹಾಗಾದರೆ ಎಣ್ಣೆಯ ಪರಿಶುದ್ಧತೆಯನ್ನು ತಿಳಿಯುವುದಾದರೂ ಹೇಗೆ? ಬಳಸುವ ಜನಸಾಮಾನ್ಯರ ಪಾಡೇನು? ಆದ್ದರಿಂದ ಸಂಬಂಧಪಟ್ಟ ತಜ್ಞರು ಇದರ ಒಳಮರ್ಮ ತಿಳಿಸಬೇಕು. ಆಗ ಬಳಕೆದಾರ ಜಾಗೃತರಾಗಲು ಸಾಧ್ಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.