ಎದೆ ಹಾಲು ಇಲ್ಲದ ನೋವು: ಆತ್ಮಹತ್ಯೆ

7

ಎದೆ ಹಾಲು ಇಲ್ಲದ ನೋವು: ಆತ್ಮಹತ್ಯೆ

Published:
Updated:

ಹಾವೇರಿ: ಮೂರು ತಿಂಗಳ ಮಗುವಿಗೆ ಉಣಿಸಲು ಎದೆ ಹಾಲು ಇಲ್ಲದ್ದನ್ನು ಮನಸ್ಸಿಗೆ ಹಚ್ಚಿಕೊಂಡ ತಾಯಿಯೊಬ್ಬಳು ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿಗ್ಗಾವಿಯಲ್ಲಿ ನಡೆದಿದೆ.ಪಟ್ಟಣದ ಮಂಜುಳಾ ಮುದುಕಣ್ಣ ಶಿರಗುಪ್ಪಿ (22 ವರ್ಷ) ಎಂಬುವಳೇ ಆತ್ಮಹತ್ಯೆ ಮಾಡಿಕೊಂಡ ತಾಯಿ. ತನ್ನ ಚೊಚ್ಚಲ ಹೆರಿಗೆಗಾಗಿ ಏಳು ತಿಂಗಳ ಹಿಂದೆ ತವರಿಗೆ ಆಗಮಿಸಿದ್ದ ಈಕೆ, ಕಳೆದ ಮೂರು  ತಿಂಗಳ ಹಿಂದೆ ಹೆರಿಗೆಯಾಗಿತ್ತು. ಹೆರಿಗೆ ಆದ ನಂತರ ಮಗುವಿಗೆ ಕುಡಿಸಲು ಎದೆ ಹಾಲು ಇಲ್ಲದ್ದಕ್ಕೆ ಬೇಸರಗೊಂಡು ನೇಣು ಹಾಕಿ ಕೊಂಡು ಅತ್ಮಹತ್ಯೆ ಮಾಡಿಕೊಂಡಿ ದ್ದಾಳೆ ಎಂದು ಮೂಲಗಳು ತಿಳಿಸಿವೆ.ಮೃತಳ ತಾಯಿ ಯಲ್ಲವ್ವ ಬಸವಂತಪ್ಪ ಮತ್ತೂರ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry