ಎನ್.ಟಿ.ಟಿ ಕಾರ್ಯಾಗಾರ

7

ಎನ್.ಟಿ.ಟಿ ಕಾರ್ಯಾಗಾರ

Published:
Updated:

ಮಕ್ಕಳ ಮನಸ್ಸು ಬಿಳಿ ಹಾಳೆಯಂತೆ ಅಲ್ಲಿ ಏನು ಬರೆಯುತ್ತೇವೆ ಎನ್ನುವುದು ಬಹಳ ಮುಖ್ಯ. ಅವರ ಮುಂದಿನ ಜೀವನವನ್ನು ನಿರ್ಧರಿಸುವಲ್ಲಿ ಈ ಅಂಶ ತನ್ನದೇ ಪಾತ್ರ ವಹಿಸುತ್ತದೆ. ಅಂತಹ ಮಕ್ಕಳ ಮನಸ್ಸನ್ನು ಅರಿತುಕೊಂಡು ಅವರ ಭವಿಷ್ಯವನ್ನು ಹೇಗೆ ರೂಪಿಸುವುದು ಎಂಬ ಬಗ್ಗೆ ಎಲ್ಲಾ ಶಿಕ್ಷಕರಿಗೂ ತರಬೇತಿ ಇರುವುದಿಲ್ಲ. ಈ ಬಗ್ಗೆ ಮಹಿಳೆಯರಿಗೆ ಸೂಕ್ತ ತರಬೇತಿ ನೀಡುವ ಹಾಗೂ ಅವರನ್ನು ಯಶಸ್ವಿ ಶಿಕ್ಷಕಿಯರನ್ನಾಗಿ ಮಾಡುವ ಪ್ರಯತ್ನದ ಫಲವಾಗಿ  `ಸೆಂಟರ್ ಫಾರ್ ಎಜುಕೇಷನ್ ಆಂಡ್ ಎಕ್ಸಲೆನ್ಸಿ~  ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದೆ. 

ಎನ್.ಟಿ.ಟಿ (ನರ್ಸರಿ ಟೀಚರ್ ಟ್ರೇನಿಂಗ್ ಕೋರ್ಸ್) ಎಂದರೇನು, ಅದರಿಂದ ಏನು ಪ್ರಯೋಜನ, ಲಭ್ಯ ಇರುವ ಅವಕಾಶಗಳೇನು ಎಂಬ ಬಗ್ಗೆ ಕಾರ್ಯಾಗಾರದಲ್ಲಿ ತಜ್ಞರು ಮಾಹಿತಿ ನೀಡಲಿದ್ದಾರೆ.

ಪಿಯುಸಿ ಮುಗಿಸಿದ 18 ವರ್ಷದ ಮೇಲ್ಪಟ್ಟ ಮಹಿಳೆಯರು ಯಾರೇ ಆಗಲಿ ಈ ಎನ್‌ಟಿಸಿ ಕೋರ್ಸ್‌ನಲ್ಲಿ ಪಾಲ್ಗೊಳ್ಳಬಹುದು.

ಈ ಆರು ತಿಂಗಳ ಅವಧಿಯಲ್ಲಿ ಎನ್.ಟಿ.ಟಿ. ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ 2 ವರ್ಷದಿಂದ 6 ವರ್ಷದ ಮಕ್ಕಳ ಮನಸ್ಥಿತಿ ಹೇಗಿರುತ್ತದೆ, ಅವರ ಹಾವ-ಭಾವದ ಭಾಷೆಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು, ಗುರುಗಳು ಮತ್ತು ಪಾಲಕರ ಜೊತೆ ಮಕ್ಕಳು ಹೇಗೆ ವರ್ತಿಸಬೇಕು ಎಂಬುದು ಸೇರಿದಂತೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಏನು ಮಾಡಬೇಕೆನ್ನುವ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಲಾಗುವುದು ಎನ್ನುತ್ತಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಸಂಪತ್‌ಕುಮಾರ್.

ಎನ್.ಟಿ.ಟಿ ಎನ್ನುವುದು ನಿರುದ್ಯೋಗಿ ಮಹಿಳೆಯರಿಗೆ ಸಂಜೀವಿನಿಯಿದ್ದಂತೆ. ನಿರುದ್ಯೋಗ ಪದವೀಧರರಿಗೆ ಮತ್ತು ಮನೆಯಲ್ಲಿರುವ ಗೃಹಿಣಿಯರಿಗೆ ಉದ್ಯೋಗ ಒದಗಿಸುವ, ನಿರುದ್ಯೋಗವನ್ನು ಹೊಡೆದೋಡಿಸುವ, ವರಮಾನ ತರುವ ಕಾಯಕವಾಗಲಿದೆ.

ಪದವೀಧರ ವಿದ್ಯಾರ್ಥಿಗಳು, ಗೃಹಿಣಿಯರು ತಮ್ಮ ತಮ್ಮ ಪ್ರದೇಶಗಳಲ್ಲಿಯೇ ಇಂತಹ ಶಾಲೆಗಳನ್ನು ತೆರೆಯಬಹುದು. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದು ಹೊಸ ಉದ್ಯೋಗ ಆರಂಭಿಸಬೇಕೆನ್ನುವ ಉತ್ಸಾಹಿ ಮಹಿಳೆಯರಿಗೆ ಹೊಸ ಕೇಂದ್ರಗಳನ್ನು ತೆರೆಯಲು ಪ್ರೋತ್ಸಾಹ ನೀಡುವುದಲ್ಲದೆ ಯಾವುದೇ ಶುಲ್ಕ ಪಡೆಯದೆ ಫ್ರ್ಯಾಂಚೈಸಿ ಶಾಲೆಗಳಿಗೆ ತೆರಳಿ ಸಂಸ್ಥೆಯ ವತಿಯಿಂದ ನೆರವಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ.

ಈ ವಲಯದಲ್ಲಿರುವ ವಿಪುಲ ಅವಕಾಶಗಳನ್ನು ನಿರುದ್ಯೋಗಿ ಯುವಕ-ಯುವತಿಯರು, ಗೃಹಿಣಿಯರು, ಪದವೀಧರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೇಗೆ ಬಳಸಿಕೊಳ್ಳಬೇಕೆನ್ನುವ ಕುರಿತು `ದಿ ಕ್ರೀಯೆಟಿವ್ ಪ್ರೀ ಟೀಚರ್ಸ್‌~ ಎನ್ನುವ ಪರಿಕಲ್ಪನೆಯಡಿ ಒಂದು ದಿನದ ಉಚಿತ ಕಾರ್ಯಾಗಾರವನ್ನು ಸಿ.ಇ.ಇ.ಝಡ್ ಸಂಸ್ಥೆ ಹಮ್ಮಿಕೊಂಡಿದೆ. ಫೆಬ್ರುವರಿ 18ರಂದು ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕಾರ್ಯಾಗಾರ ನಡೆಯಲಿದ್ದು, ಆಸಕ್ತರು ವಿವರಗಳಿಗೆ  ಸೆಂಟರ್ ಫಾರ್ ಎಜುಕೇಷನ್ ಆಂಡ್ ಎಕ್ಸಲನ್ಸಿ, ಎಂ.ಆರ್.ಸಂಪತ್‌ಕುಮಾರ್ (9845351965) ಅವರನ್ನು ಸಂಪರ್ಕಿಸಬಹುದು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry