ಎನ್ನೆಸ್ಸೆಸ್‌ನಿಂದ ಸೌಹಾರ್ದ ವೃದ್ಧಿ

7

ಎನ್ನೆಸ್ಸೆಸ್‌ನಿಂದ ಸೌಹಾರ್ದ ವೃದ್ಧಿ

Published:
Updated:
ಎನ್ನೆಸ್ಸೆಸ್‌ನಿಂದ ಸೌಹಾರ್ದ ವೃದ್ಧಿ

ಕುಶಾಲನಗರ: `ಎನ್ನೆಸ್ಸೆಸ್ ಶಿಬಿರಗಳು ಸಮಾಜದಲ್ಲಿ ಏಕತೆ, ಸೌಹಾರ್ದ ಬೆಳೆಸುವಲ್ಲಿ ಸಹಕಾರಿಯಾಗಿವೆ~ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಸ್.ಪಿ.ಚರಿತಾ ಅಭಿಪ್ರಾಯಪಟ್ಟರು.ಸರ್ಕಾರಿ ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಇಲ್ಲಿನ ಬೈಚನಹಳ್ಳಿಯಲ್ಲಿ `ಜಲ- ವನ ಸಂವರ್ಧನೆ~ ವಿಷಯದಡಿ ಹಮ್ಮಿಕೊಂಡಿರುವ ವಾರ್ಷಿಕ ಶಿಬಿರ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಶಿಬಿರಾಧಿಕಾರಿ ಎಚ್.ಕೆ.ತಿಲಗಾರ್, ಶ್ರಮದಾನದ ಚಟುವಟಿಕೆಗಳ ಕುರಿತು ತಿಳಿಸಿದರು. ಪ್ರಾಂಶುಪಾಲ ಜಿ.ಕೆ.ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಶಿಬಿರಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಪ.ಪಂ.ಸದಸ್ಯೆ ಕೆ.ಆರ್.ರೇಣುಕಾ, ತಾ.ಪಂ.ಸದಸ್ಯ ಬಿ.ವಿ.ಸತೀಶ್, ಎಸ್‌ಡಿಎಂಸಿ ಅಧ್ಯಕ್ಷ ಶೇಖರ್ ನಾಯಕ್, ಮುಖ್ಯ ಶಿಕ್ಷಕಿ ಎಸ್.ಕೆ.ಮಲ್ಲಮ್ಮ, ಸಹ ಶಿಬಿರಾಧಿಕಾರಿ ಎಚ್.ಹೂವಮ್ಮ, ಕಾಲೇಜು ಸಮಿತಿ ಸದಸ್ಯ ಬಿ.ಎಸ್.ಶಿವಕುಮಾರ್, ಉಪನ್ಯಾಸಕ ಎಚ್.ಎಸ್.ಗುರುಸ್ವಾಮಿ ಇತರರು ಇದ್ದರು. ವಿದ್ಯಾಶ್ರೀ  ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry