ಎನ್‌ಆರ್‌ಎಐನಿಂದ ವಿಜಯ್ ಕುಮಾರ್, ನಾರಂಗ್‌ಗೆ ನಗದು ಬಹುಮಾನ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಎನ್‌ಆರ್‌ಎಐನಿಂದ ವಿಜಯ್ ಕುಮಾರ್, ನಾರಂಗ್‌ಗೆ ನಗದು ಬಹುಮಾನ

Published:
Updated:
ಎನ್‌ಆರ್‌ಎಐನಿಂದ ವಿಜಯ್ ಕುಮಾರ್, ನಾರಂಗ್‌ಗೆ ನಗದು ಬಹುಮಾನ

ನವದೆಹಲಿ (ಪಿಟಿಐ): ಭಾರತದ ರಾಷ್ಟ್ರೀಯ ರೈಫಲ್ ಸಂಸ್ಥೆಯು (ಎನ್‌ಆರ್‌ಎಐ) ಲಂಡನ್ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಪಡೆದ ವಿಜಯ್ ಕುಮಾರ್ ಅವರಿಗೆ 20 ಲಕ್ಷ ಹಾಗೂ ಕಂಚಿನ ಪದಕ ಪಡೆದ ಗಗನ್ ನಾರಂಗ್ ಅವರಿಗೆ 15 ಲಕ್ಷ ರೂಪಾಯಿ ನಗದು ಬಹುಮಾನವನ್ನು ಬುಧವಾರ ಘೋಷಿಸಿದೆ.ಲಂಡನ್ ಒಲಿಂಪಿಕ್ಸ್‌ನ ಶೂಟಿಂಗ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ ವಿಜಯ್ ಕುಮಾರ್ ಅವರಿಗೆ 20 ಲಕ್ಷ ಹಾಗೂ ಗಗನ್ ನಾರಂಗ್ ಅವರಿಗೆ 15 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದ ಎನ್‌ಆರ್‌ಎಐನ ಅಧ್ಯಕ್ಷ ರಣಿಂಧರ್ ಸಿಂಗ್ ಅವರು ಶೀಘ್ರದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಿ ಅದರಲ್ಲಿ ನಗದು ಬಹುಮಾನದ ಚೆಕ್ ನೀಡಲಾಗುವುದು ಎಂದು ತಿಳಿಸಿದರು.ಒಲಿಂಪಿಕ್ಸ್‌ನ ರಾಯಲ್ ಆರ್ಟಿಲರಿ ಬ್ಯಾರಕ್ಸ್ ಶೂಟಿಂಗ್ ರೇಂಜ್‌ನಲ್ಲಿ ನಡೆದ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಲು ವಿಫಲರಾಗಿದ್ದ ವಿಜಯ್ ಕುಮಾರ್ ಅವರು, 25 ಮೀಟರ್ಸ್ ರ್‍ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಎರಡನೇಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಪಡೆದಿದ್ದರು.50ಮೀಟರ್ ರೈಫಲ್ ತ್ರೀ ಪೊಸಿಷನ್ ಶೂಟಿಂಗ್‌ನಲ್ಲಿ ಅರ್ಹತೆ ಗಳಿಸುವಲ್ಲಿ ವಿಫಲರಾಗಿದ್ದ ನಾರಂಗ್ ಅವರು, 10 ಏರ್ ರೈಫಲ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು. ನಾರಂಗ್ ಅವರ ಈ ಸಾಧನೆಗೆ ಹರಿಯಾಣ ಸರ್ಕಾರ ಕೂಡ ಒಂದು ಕೋಟಿ ರೂಪಾಯಿ ಬಹುಮಾನ ಪ್ರಕಟಿಸಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry