ಸೋಮವಾರ, ಏಪ್ರಿಲ್ 19, 2021
32 °C

ಎನ್‌ಆರ್‌ಎನ್‌ಗೆ ಗೌರವ; ತಪ್ಪಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಉದ್ಘಾಟಕರನ್ನಾಗಿ ಖ್ಯಾತ ಉದ್ಯಮಿ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿಯವರನ್ನು ಆಯ್ಕೆಗೊಳಿಸಿರುವ ಕ್ರಮವನ್ನು ಅನೇಕರು ಪ್ರಶ್ನಿಸಿದ್ದಾರೆ. ಆದರೆ ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪನವರು ಮುಖ್ಯಮಂತ್ರಿಗಳು ಮುತ್ಸದ್ಧಿತನ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಜೊತೆಗೆ ನಮ್ಮ ಕನ್ನಡ ಸಾಹಿತಿಗಳು, ರಾಜಕಾರಣಿಗಳು ಮೊದಲಾದವರೆಲ್ಲ ತಮ್ಮ ಇತಿಮಿತಿಗಳನ್ನು ಅರಿತುಕೊಳ್ಳಬೇಕು ಎಂದು ಯಾರ ಹೆಸರನ್ನು ಪ್ರಸ್ತಾಪಿಸದೆ ಪಾಟೀಲ ಪುಟ್ಟಪ್ಪನವರು ಮಾತನಾಡಿದ್ದಾರೆ.ಗಂಗ, ಕದಂಬ, ಚೋಳ, ಚಾಲುಕ್ಯ, ರಾಷ್ಟ್ರಕೂಟ ಮೊದಲಾದ ರಾಜಮನತೆನಗಳು ಸೀಮೋಲಂಘನಗೈದು 7-10ನೇ ಶತಮಾನದಷ್ಟು ಹಿಂದೆಯೇ ದೂರದ ಈಶಾನ್ಯ ಭಾರತದ ನೇಪಾಳ, ಬಿಹಾರ ಮತ್ತು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮೊದಲಾದ ಕಡೆ ರಾಜ್ಯ ಕಟ್ಟಿ ಸಾಮ್ರಾಟರೆನಿಸಿ ಆಳಿ ಕನ್ನಡದ ಕೀರ್ತಿ ಧ್ವಜ ಎತ್ತಿ ಹಿಡಿದಿದ್ದಾರೆ.ಸಿಪಿಎನ್ ಸಿನ್ಹಾ ಅವರು ತಮ್ಮ ಮಿಥಿಲೆಯನ್ನಾಳಿದ ಕರ್ನಾಟರು (Mithila under the karnatas) ಎಂಬ ಕೃತಿಯನ್ನು ಉಲ್ಲೇಖಿಸಬಹುದು.ನಾನ್ಯದೇವ, ಗಂಗರಸ, ಚಾಲುಕ್ಯರು, ಪಾಲರು, ಸೇನರು ಮೊದಲಾದವರು ಕರ್ನಾಟರೇ. ಅಖಿಲ ಭಾರತ ಮಟ್ಟದ ಕರ್ನಾಟಕ ಕಥೆ ಇದಾದಂತೆ ಪ್ರಪಂಚದಾದ್ಯಂತ ವಾಸ್ತುಶಿಲ್ಪ ವೈಭವದಲ್ಲಿ ಕರ್ನಾಟಕದ ವಾಸ್ತುಶಿಲ್ಪ ಶೈಲಿ ಎತ್ತಿ ಹಿಡಿದ ಸಂಗತಿ ಸಿಂಹಳ ಮತ್ತು ಇಂಡೋನೇಷ್ಯಾ ಮೊದಲಾದೆಡೆ ಇವೆ.ಅವೆಲ್ಲವುಗಳ ಸಮೀಕ್ಷೆ ನಡೆಯಬೇಕು. ಹೀಗೆ ಹೋದವರಲ್ಲಿ ಕೆಲವರು ತಿರುಗಿ ಬಂದರು. ಇನ್ನುಳಿದವರು ಅಲ್ಲಿಯ ಜನಸಾಮಾನ್ಯರಲ್ಲಿ ಬೆರೆತು ಹೋದರೂ ಕರ್ನಾಟ, ಕರ್ನಾಟಕ್ವವನ್ನು ಮರೆತಿಲ್ಲ. ಅವರನ್ನು ಗುರುತಿಸಬೇಕು, ಗೌರವಿಸಬೇಕು. ವಿಶ್ವಮಟ್ಟದ ಸಾಧನೆ ಮಾಡಿ ಮನ್ನಣೆ ಪಡೆದ ಕನ್ನಡಿಗರಿಗೆ ಗೌರವ ತೋರಿಸಿದರೆ ಏನು ತಪ್ಪು?

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.