ಎನ್‌ಎಚ್‌ಆರ್‌ಸಿಗೆ ಮತ್ತೆ ಉನ್ನತ ಸ್ಥಾನ

ಭಾನುವಾರ, ಜೂಲೈ 21, 2019
22 °C

ಎನ್‌ಎಚ್‌ಆರ್‌ಸಿಗೆ ಮತ್ತೆ ಉನ್ನತ ಸ್ಥಾನ

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಬಗ್ಗೆ ನಾಗರಿಕ ಸಂಘ ಸಂಸ್ಥೆಗಳು ನೀಡಿರುವ ದೂರನ್ನು ಬದಿಗಿರಿಸಿ, ಅಂತರ ರಾಷ್ಟ್ರೀಯ ಸಮಿತಿಯು ಆಯೋಗಕ್ಕೆ ಉನ್ನತ ಸ್ಥಾನವನ್ನೇ ಉಳಿಸಿಕೊಟ್ಟಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಅಂತರ ರಾಷ್ಟ್ರೀಯ ಸಮಿತಿಯು ಎನ್‌ಎಚ್‌ಆರ್‌ಸಿಗೆ `ಎ~ ಶ್ರೇಣಿಯನ್ನು ನೀಡಿದೆ. ಇತ್ತೀಚೆಗೆ ಜಿನೀವಾದಲ್ಲಿ ನಡೆದಿದ್ದ ಸಮಿತಿಯ ಸಭೆಯಲ್ಲಿ, ಭಾರತ ಅಲ್ಲದೆ ಇತರ ದೇಶಗಳ ಸೇವೆಯನ್ನೂ ಈ ಶ್ರೇಣಿಗಾಗಿ ಪರಾಮರ್ಶಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry