`ಎನ್‌ಎಸ್‌ಎಸ್‌ನಿಂದ ಆರೋಗ್ಯ ರಾಷ್ಟ್ರ ನಿರ್ಮಾಣ'

7

`ಎನ್‌ಎಸ್‌ಎಸ್‌ನಿಂದ ಆರೋಗ್ಯ ರಾಷ್ಟ್ರ ನಿರ್ಮಾಣ'

Published:
Updated:

ವಿಜಾಪುರ: ಆರೋಗ್ಯ ಪೂರ್ಣವಾದ ರಾಷ್ಟ ನಿರ್ಮಾಣ ಮಾಡುವುದರಲ್ಲಿ ಎನ್.ಎಸ್.ಎಸ್. ಮಹತ್ವಪೂರ್ಣ ಪಾತ್ರ ವಹಿಸುತ್ತಿದೆ ಎಚಿದು ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ಡಾ. ಆರ್.ಜಿ. ಅಳಗಿ ಹೇಳಿದರು.

ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣದಲ್ಲಿ  ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆ ಎ.ಬಿ. ಮತ್ತು ಮುಕ್ತ ಘಟಕಗಳ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳ  ವ್ಯಕ್ತಿತ್ವ ವಿಕಸನಕ್ಕೆ ರಾಷ್ಟ್ರೀಯ ಮನೋಭಾವನೆ ಭಾವಕ್ಯತೆ ಮೂಡಿಸಲು  ಇಂತಹ  ವಿಶೇಷ ಶಿಬಿರಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಸಧೃಡತೆಯನ್ನು ಹೊಂದಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ವಿವಿ ಶಿಕ್ಷಣ ವಿಭಾಗದ ಮುಖ್ಯಸ್ಥ  ಡಾ. ವಿ.ವಿ. ಮಳಗಿ  ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ವ್ಯಕ್ತಿತ್ವ ವೃದ್ಧಿಸಿಕೊಳ್ಳಲು ಕೇವಲ ಪಠ್ಯದಿಂದ ಸಾಧ್ಯವಿಲ್ಲ. ಅದರ ಜೊತೆಗೆ ಕ್ರಿಯಾತ್ಮಕವಾಗಿ, ಚಾರಿತ್ರ್ಯವಂತರಾಗಿ, ಬೌದ್ಧಿಕವಾಗಿ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವ್ಯಕ್ತಿತ್ವ ವಿಕಸನ ಸಾಧಿಸಬೇಕು ಎಂದು ಸಲಹೆ ನೀಡಿದರು.ವಿದ್ಯಾರ್ಥಿನಿಯರು ಉನ್ನತ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾಧನೆಯ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡಬೇಕು. ಸ್ವಾಭಿಮಾನಿ, ಸ್ವತಂತ್ರ ಜೀವನ ನಿರ್ವಹಣೆ ಮೂಲಕ ದೇಶದ ಉನ್ನತಿಗೆ ಸಹಕರಿಸಬೇಕು ಎಂದು ಹೇಳಿದರು.ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಬಸವರಾಜ್ ಲಕ್ಕಣ್ಣನವರ ಸ್ವಾಗತಿಸಿದರು. ಟಿ. ಶಾಂತಾದೇವಿ ಕಾರ್ಯಕ್ರಮ ನಿರೂಪಿಸಿದರು. ಡಾ. ಗವಿಸಿದ್ದಪ್ಪ ಆನಂದಳ್ಳಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry