ಎನ್‌ಎಸ್‌ಎಸ್‌ನಿಂದ ಸೇವಾ ಮನೋಭಾವನೆ ವೃದ್ಧಿ

7

ಎನ್‌ಎಸ್‌ಎಸ್‌ನಿಂದ ಸೇವಾ ಮನೋಭಾವನೆ ವೃದ್ಧಿ

Published:
Updated:
ಎನ್‌ಎಸ್‌ಎಸ್‌ನಿಂದ ಸೇವಾ ಮನೋಭಾವನೆ ವೃದ್ಧಿ

ಪಿರಿಯಾಪಟ್ಟಣ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಮೂಡಿಸುವಲ್ಲಿ ಎನ್‌ಎಸ್‌ಎಸ್ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮಾಜಿ ಶಾಸಕ ಎಚ್.ಸಿ. ಬಸವರಾಜು ತಿಳಿಸಿದರು.ಪಟ್ಟಣದ ಒಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಸ್ವಾರ್ಥ ಮನೋಭಾವನೆ ಹೆಚ್ಚಾಗುತ್ತಿದ್ದು ನಿಸ್ವಾರ್ಥದಿಂದ ಕೆಲಸ ಮಾಡುವವರು ಕಡಿಮೆಯಾಗಿದ್ದಾರೆ. ನಾವು ದೇಶದ ರಕ್ಷಕರಾಗಬೇಕೆ ಹೊರತು, ಭಕ್ಷಕರಾಗಬಾರದು ಎಂದರು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಮಂಜುನಾಥ್ ಮಾತನಾಡಿ, ಕಿರಿಯ ವಯಸ್ಸಿನಲ್ಲಿಯೇ ಕಾನೂನಿನ ಅರಿವಿದ್ದರೆ ಭವಿಷ್ಯದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ತಿಮ್ಮನಾಯಕ, ಸದಸ್ಯರಾದ ಮಹದೇವ್, ಮಂಜುನಾಥ್‌ಸಿಂಗ್, ವೇಣುಗೋಪಾಲ್, ವಕೀಲರಾದ ಬಿ.ಎಂ. ಕುಮಾರ್, ಶಿವಸ್ವಾಮಿ, ಜಿ.ಎಸ್. ನಾಗರಾಜು ಪಿ.ಕೆ. ಸುರೇಶ್, ಮುಖಂಡ ಸ್ವಾಮಿ, ಕಾರ್ಯ ಕ್ರಮಾಧಿಕಾರಿ ಕೆ.ಕೆ. ಅನಿತ್ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry