ಶನಿವಾರ, ಏಪ್ರಿಲ್ 17, 2021
23 °C

ಎನ್‌ಎಸ್‌ಯುಐಗೆ ಶೀಘ್ರ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ನವೆಂಬರ್ ಕೊನೆಯ ವಾರದಲ್ಲಿ ಎನ್‌ಎಸ್‌ಯುಐಗೆ ಹೊಸ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಲಾಗುವುದು ಎಂದು ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ವಿಜೀತ್ ಎಂ. ಹೇಳಿದರು.

ನಗರದ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿಶಕ್ತಿಗೆ ಪಕ್ಷದ ತತ್ವ ಸಿದ್ಧಾಂತಗಳನ್ನು ತಿಳಿಯಪಡಿಸಿ ಪಕ್ಷ ಸಂಘಟನೆಯನ್ನು ಭದ್ರಗೊ ಳಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷದ ಪ್ರಮುಖ ಸಮಿತಿ ಕಾರ್ಯೋ ನ್ಮುಖವಾಗಬೇಕು ಎಂದು  ಹೇಳಿದರು. ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ಕಾಂಗ್ರೆಸ್ ಪಕ್ಷ ವಿದ್ಯಾರ್ಥಿಗಳ ಹಿತವನ್ನು ಬಯಸುತ್ತದೆ ಎಂದರು.ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ರಾಜು ಮನ್ನಿಕೇರಿ, ಪ್ರಭುದೇವ ರುದ್ರಾಕ್ಷಿ, ಮುತ್ತಣ್ಣ ಬೆಣ್ಣೂರ, ಎಸ್.ಎಂ.ಇದ್ದಲಗಿ, ಪ್ರಶಾಂತ ಬಾದಾಮಿ, ಮಂಜು ಮಲಘಾಣ, ಪರಶು ಲಮಾಣಿ, ನಿರ್ಮಲಾ ತೇಲಕರ, ಕುಮಾರ ನಾಯಕರ, ಚಂದ್ರು ಬೆಣ್ಣೂರ, ರಾಮು ಕಿರಸೂರ ಮತ್ತಿತರರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.