ಸೋಮವಾರ, ನವೆಂಬರ್ 18, 2019
21 °C

ಎನ್‌ಟಿಆರ್ ಚಿತ್ರ ಬಳಸಲು ಪುತ್ರರ ಕಿತ್ತಾಟ

Published:
Updated:

ಹೈದರಾಬಾದ್ (ಐಎಎನ್‌ಎಸ್): ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ (ಎನ್.ಟಿ.ಆರ್.) ಭಾವಚಿತ್ರ ಬಳಸುವುದಕ್ಕೆ ಸಂಬಂಧಿಸಿದಂತೆ ಅವರ ಪುತ್ರರ ನಡುವಿನ ಹಗ್ಗಜಗ್ಗಾಟ ಸೋಮವಾರ ತಾರಕಕ್ಕೇರಿದೆ.ಎನ್.ಟಿ.ಆರ್. ಭಾವಚಿತ್ರ ಬಳಸುವುದನ್ನು ತಡೆಯಲು ಪ್ರಯತ್ನಿಸುತ್ತಿರುವ ಎನ್.ಟಿ.ಆರ್. ಅವರ ಕಿರಿಯ ಪುತ್ರ ಎನ್. ಬಾಲಕೃಷ್ಣ ಅವರ ಧೋರಣೆಗೆ ಹಿರಿಯ ಪುತ್ರ ಎನ್. ಹರಿಕೃಷ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಎನ್.ಟಿ.ಆರ್., ಅವರ ಮೊಮ್ಮಗ ಹಾಗೂ ತೆಲುಗು ಖ್ಯಾತ ನಟ ಜೂನಿಯರ್ ಎನ್.ಟಿ.ಆರ್., ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಮತ್ತು ಅವರ ಪುತ್ರ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಅವರ ಭಾವಚಿತ್ರಗಳನ್ನು ಬಳಸಿದ್ದೇ ಈ ಸಹೋದರರ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿದೆ.ಎನ್.ಟಿ.ಆರ್. ಭಾವಚಿತ್ರ ಬಳಸಿರುವ ವೈಎಸ್‌ಆರ್ ಕಾಂಗ್ರೆಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎರಡು ದಿನಗಳ ಹಿಂದೆಯಷ್ಟೇ ಪ್ರಸಿದ್ಧ ತೆಲುಗು ನಟ ಬಾಲಕೃಷ್ಣ ಎಚ್ಚರಿಕೆ ನೀಡಿದ್ದರು.

ಪ್ರತಿಕ್ರಿಯಿಸಿ (+)