ಮಂಗಳವಾರ, ನವೆಂಬರ್ 19, 2019
26 °C

ಎನ್‌ಡಿಎಂಎ ಕಾರ್ಯವೈಖರಿಗೆ ಸಿಎಜಿ ತೀವ್ರ ಅಸಮಾಧಾನ

Published:
Updated:

ನವದೆಹಲಿ(ಪಿಟಿಐ): ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಮಹಾಲೇಖಪಾಲರು, ಪ್ರಮುಖ ಪ್ರದೇಶಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಂತಹ ಘಟನೆಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಪ್ರಾಧಿಕಾರ ಹಿಂದುಳಿದಿದೆ ಎಂದು ಆರೋಪಿಸಿದೆ.ಎನ್‌ಡಿಎಂಎ ಸಂಸ್ಥೆ ಕುರಿತು ಸಿಎಜಿ ನೀಡಿರುವ ಪ್ರಗತಿ ವರದಿಯಲ್ಲಿ  ಈ ವಿಷಯವನ್ನು ಪ್ರಸ್ತಾಪಿಸಿದೆ. ಈ ವರದಿಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಗಳವಾರ ಮಂಡಿಸಲಾಯಿತು.`ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಾಜ್ಯಗಳ ನೋಡಲ್ ಸಂಸ್ಥೆಗಳೊಂದಿಗೆ ಸಮರ್ಪಕವಾಗಿ ಸಮನ್ವಯ ಸಾಧಿಸದೇ, ನಿರ್ವಹಣೆಗೆ ಬೇಕಾದ ಹಣಕಾಸು ವ್ಯವಸ್ಥೆಯನ್ನೂ ಮಾಡಿಕೊಳ್ಳದೇ ನಿರ್ಲಕ್ಷ್ಯ ತೋರಿದೆ. ಇದರಿಂದ ವಿಪತ್ತು ನಿರ್ವಹಣೆಗೆ ತೊಡಕುಂಟಾಗಿದೆ' ಎಂದು ಸಿಎಜಿ ವರದಿ ತಿಳಿಸಿದೆ. ಈ ಕುರಿತು ರಾಷ್ಟ್ರಮಟ್ಟದಲ್ಲಿ ಯಾರು ಯಾವ ಪಾತ್ರನಿರ್ವಹಿಸಬೇಕೆಂದು ಸಲಹೆ ನೀಡಿದೆ. 

ಪ್ರತಿಕ್ರಿಯಿಸಿ (+)