ಎನ್‌ಡಿಎ ಜತೆ ಮೈತ್ರಿ ಇಲ್ಲ : ಟಿಎಂಸಿ ಸ್ಪಷ್ಟನೆ

7

ಎನ್‌ಡಿಎ ಜತೆ ಮೈತ್ರಿ ಇಲ್ಲ : ಟಿಎಂಸಿ ಸ್ಪಷ್ಟನೆ

Published:
Updated:

ಕೋಲ್ಕತ್ತ (ಐಎಎನ್ಎಸ್) : ತೃಣಮೂಲ ಕಾಂಗ್ರೆಸ್ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಅಥವಾ ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ್ ಸೋಮವಾರ ಇಲ್ಲಿ ತಿಳಿಸಿದರು. ~ಕಾಂಗ್ರೆಸ್ ತನ್ನ ಚಿಲ್ಲರೆ ಮಾರುಕಟ್ಟೆಯಲ್ಲಿ ಎಫ್‌ಡಿಐ ಮತ್ತು ತೈಲ ಬೆಲೆ ಏರಿಕೆ ನಿರ್ಧಾರವನ್ನು ಹಿಂದೆ ಪಡೆದರೆ, ಮೈತ್ರಿ ಕುರಿತು ಅವರು ಟಿಎಂಸಿ ಬಳಿ ಪ್ರಸ್ತಾಪಿಸಬಹುದು~ ಎಂದು ಮುಕುಲ್ ರಾಯ್ ಹೇಳಿದರು.ಆರ್ಥಿಕ ಪುನಶ್ಚೇತನಕ್ಕಾಗಿ ಯುಪಿಎ ಸರ್ಕಾರ, ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಡೀಸೆಲ್ ಬೆಲೆ ಏರಿಕೆ ನಿರ್ಧಾರವನ್ನು ತೆಗೆದುಕೊಂಡಿದ್ದನ್ನು ವಿರೋಧಿಸಿ, ತೃಣಮೂಲ ಕಾಂಗ್ರೆಸ್ ಯುಪಿಎ ಜತೆ ಮೈತ್ರಿ ಮುರಿದುಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry