ಎನ್‌ಡಿಎ ವಿದೇಶಾಂಗ ನೀತಿ ತರಾಟೆಗೆ

7
ಮೋದಿ ಟೀಕೆಗೆ ಕಾಂಗ್ರೆಸ್‌ ತಿರುಗೇಟು

ಎನ್‌ಡಿಎ ವಿದೇಶಾಂಗ ನೀತಿ ತರಾಟೆಗೆ

Published:
Updated:

ನವದೆಹಲಿ (ಪಿಟಿಐ): ಗಡಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾಡಿ­ರುವ ಟೀಕೆಗೆ ಉತ್ತರ ನೀಡಿ­ರುವ  ಕಾಂಗ್ರೆಸ್‌, ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿರುವ ವಿದೇಶಾಂಗ ನೀತಿಯ ಲೋಪಗಳನ್ನು  ಪ್ರಸ್ತಾಪಿಸಿದೆ.‘ಗಡಿಯಲ್ಲಿ ಉಂಟಾಗುತ್ತಿರುವ ಸಮಸ್ಯೆ­ಗಳಿಗೆ ಸೇನೆ ಕಾರಣವಲ್ಲ ಬದಲಿಗೆ ತೊಂದರೆ ಇರುವುದು ದೆಹಲಿಯಲ್ಲಿ’ ಎಂದು ಹರಿಯಾಣದ ರೇವಾರಿಯಲ್ಲಿ ನಡೆದ ಸಭೆಯಲ್ಲಿ ಮೋದಿ ಆರೋ­ಪಿಸುವ ಮೂಲಕ ಯುಪಿಎ ಸರ್ಕಾರದ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿದ್ದನ್ನು ಪ್ರಸ್ತಾಪಿಸಿದ ಕೇಂದ್ರ ವಾರ್ತಾ ಸಚಿವ ಮನಿಷ್‌ ತಿವಾರಿ, ಎನ್‌ಡಿಎ ಅಧಿಕಾರಾವಧಿಯಲ್ಲಿ ನಡೆದ ಅವಾಂತರಗಳನ್ನು ಟ್ವೀಟ್‌ ಮಾಡಿದ್ದಾರೆ.‘ಕಾರ್ಗಿಲ್‌ ಕದನ, ಕಂದಹಾರ್‌ ಅಪ­ಹರಣ, ಸಂಸತ್ತಿನ ಮೇಲೆ ದಾಳಿ­ಯಂತಹ ಪ್ರಕರಣಗಳು ನಡೆದದ್ದು ಎನ್‌ಡಿಎ ಅಧಿಕಾರಾವಧಿಯಲ್ಲೇ’ ಎಂದು ತಿವಾರಿ ಟೀಕಿಸಿದ್ದಾರೆ.ವಿದೇಶಾಂಗ ನೀತಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಅಟಲ್‌­ಬಿಹಾರಿ ವಾಜಪೇಯಿ ಸರ್ಕಾರ ತೆಗೆದು­ಕೊಂಡ ಕ್ರಮಗಳನ್ನು ಮೋದಿ ರೇವಾರಿಯ ಸಭೆಯಲ್ಲಿ ಶ್ಲಾಘಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry