ಭಾನುವಾರ, ಸೆಪ್ಟೆಂಬರ್ 22, 2019
23 °C

ಎನ್‌ಡಿಟಿವಿಯಲ್ಲಿ ಟೆಲಿಥಾನ್

Published:
Updated:

ಎನ್‌ಡಿಟಿವಿ ವಾಹಿನಿಯು ಸಪೋರ್ಟ್ ಮೈ ಸ್ಕೂಲ್ (ನನ್ನ ಶಾಲೆಯನ್ನು ಬೆಂಬಲಿಸಿ) ಅಭಿಯಾನದ ಅಂಗವಾಗಿ ದೇಶದ 8 ರಾಜ್ಯಗಳ 100ಕ್ಕೂ ಹೆಚ್ಚು ಶಾಲೆಗಳಿಗೆ ನೀರು, ನೈರ್ಮಲ್ಯ ಮತ್ತು ಇತರ ಮೂಲಭೂತ ಸೌಲಭ್ಯ ಒದಗಿಸಿಕೊಡಲು ಹಣ ಸಂಗ್ರಹಿಸಲು ಭಾನುವಾರ ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ನಿರಂತರ ನೇರ `ಟೆಲಿಥಾನ್~ ಪ್ರಸಾರ ಮಾಡಲಿದೆ.ದರ್ಶಿಲ್ ಸಫಾರಿ ಮತ್ತು ಶಂಕರ್ ಮಹಾದೇವನ್ ಅವರೊಂದಿಗೆ ಕಾರ್ಯಕ್ರಮದ ಆರಂಭ. ನಂತರ ಸಚಿನ್ ಕಿ ಪಾಠ ಶಾಲಾದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ದೇಶಾದ್ಯಂತ ಮಕ್ಕಳ ಜತೆ ನೇರ ಪ್ರಸಾರದ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ. ತಮ್ಮ ಅನುಭವ ಹಂಚಿ ಕೊಳ್ಳಲಿದ್ದಾರೆ. ಮಕ್ಕಳಿಗಾಗಿ ಎನ್‌ಡಿಟಿವಿಯ ಕ್ರೀಡಾ ಸಂಪಾದಕ ಸೊನಾಲಿ ಚಂದರ್ ಮತ್ತು ಬಾಲಿವುಡ್ ನಟ ಬೊಮನ್ ಇರಾನಿ ನಡೆಸಿಕೊಡುವ ರಸಪ್ರಶ್ನೆ ಇರುತ್ತದೆ.

 

Post Comments (+)