ಎನ್‌ಪಿಎಸ್‌ಗೆ ಶಿಫಾರಸು

ಸೋಮವಾರ, ಮೇ 20, 2019
32 °C

ಎನ್‌ಪಿಎಸ್‌ಗೆ ಶಿಫಾರಸು

Published:
Updated:

ನವದೆಹಲಿ (ಪಿಟಿಐ): ನೌಕರರ ಭವಿಷ್ಯನಿಧಿ ಯೋಜನೆಯಲ್ಲಿ (ಇಪಿಎಫ್‌ಒ) ನೀಡುತ್ತಿರುವಷ್ಟೇ ಕನಿಷ್ಠ ಬಡ್ಡಿ ದರವನ್ನು ಹೊಸ ಪಿಂಚಣಿ ವ್ಯವಸ್ಥೆಯ (ಎನ್‌ಪಿಎಸ್) ಚಂದಾದಾರಿಗೂ ನೀಡಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.`ಪಿಂಚಣಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಮಸೂದೆ-2011ಕ್ಕೆ ಸಂಬಂಧಿಸಿದಂತೆ ಶಿಫಾರಸು ಸಲ್ಲಿಸಿರುವ ಯಶವಂತ ಸಿನ್ಹಾ ಅವರನ್ನೊಳಗೊಂಡ  ಸಂಸದೀಯ ಸ್ಥಾಯಿ ಸಮಿತಿ, ಪಿಂಚಣಿ ಯೋಜನೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಗರಿಷ್ಠ ಮಿತಿ  ಶೇ 26ರಷ್ಟು ಇರಬೇಕು ಎಂದೂ ಹೇಳಿದೆ.ಕಳೆದ ಮಾರ್ಚ್ ತಿಂಗಳಲ್ಲಿ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಆದರೆ, ಪಿಂಚಣಿ ಯೋಜನೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿಗೆ ಸಂಬಂಧಿಸಿದ ವಿವಾದ ಇನ್ನೂ ಇತ್ಯರ್ಥಗೊಂಡಿಲ್ಲ. ಸದ್ಯ ಪಿಂಚಣಿ ಯೋಜನೆಗಳ ಮೇಲೆ  ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸರ್ಕಾರ ಅವಕಾಶ ಕಲ್ಪಿಸಿಲ್ಲ.`ಇಪಿಎಫ್‌ಒ~ ನೌಕರರ ಭವಿಷ್ಯ ನಿಧಿಗೆ ಶೇ 9.5ರಷ್ಟು ಬಡ್ಡಿ ದರ ನೀಡುತ್ತಿದೆ. `ಎನ್‌ಪಿಎಸ್~ ಚಂದಾದಾರರಿಗೆ ಇದಕ್ಕಿಂತ ಕಡಿಮೆ ಬಡ್ಡಿ ದೊರೆಯಬಾರದು ಎಂದೂ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.`ಎನ್‌ಪಿಎಸ್~ ಯೋಜನೆ 2004ರಲ್ಲಿ ಜಾರಿಗೆ ಬಂದಿದ್ದು, ಸುಮಾರು 24 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳು ಇದರ ವ್ಯಾಪ್ತಿಯಲ್ಲಿ ಬರುತ್ತಾರೆ. ಈ ಯೋಜನೆಯನ್ನು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸಬೇಕು ಎಂದು ಸಮಿತಿ ಸೂಚಿಸಿದೆ.ಸದ್ಯ ಪಿಂಚಣಿ ಯೋಜನೆಗಳನ್ನು ಭವಿಷ್ಯನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಎಫ್‌ಆರ್‌ಡಿಎ) ನಿರ್ವಹಿಸುತ್ತದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry