ಮಂಗಳವಾರ, ಏಪ್ರಿಲ್ 20, 2021
24 °C

ಎನ್‌ಪಿಎ ಕಳವಳ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ (ಪಿಎಸ್‌ಬಿ) ವಸೂಲಾಗದ ಸಾಲದ ಪ್ರಮಾಣ(ಎನ್‌ಪಿಎ) ಹೆಚ್ಚುತ್ತಿದೆ ಎನ್ನುವುದನ್ನು ಒಪ್ಪಿಕೊಂಡಿರುವ ಚಿದಂಬರಂ, ಆದರೆ, ಇದು ಬ್ಯಾಂಕ್‌ಗಳ ಪಾಲಿಗೆ ಎಚ್ಚರಿಕೆ ಗಂಟೆಯೇನೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.`ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಎನ್‌ಪಿಎ~ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ದೇಶದ ಆರ್ಥಿಕ ಪ್ರಗತಿ ಕುಸಿಯುತ್ತಿರುವುದರಿಂದ ಇದು ಸಹಜ. ಆದರೆ, ತೀರಾ ಕಳವಳಪಡುವ ಮಟ್ಟದಲ್ಲಿ `ಎನ್‌ಪಿಎ~ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ ಎಂದರು.ಮಾರ್ಚ್ ಅಂತ್ಯಕ್ಕೆ ಎಲ್ಲ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ `ಎನ್‌ಪಿಎ~ ದರ ಶೇ 3.17ರಷ್ಟಾಗಿದೆ. `ಜಿಡಿಪಿ~ ಚೇತರಿಕೆ ಕಂಡರೆ ಬ್ಯಾಂಕುಗಳು ಮುಂಬರುವ ತ್ರೈಮಾಸಿಕಗಳಲ್ಲಿ ಉತ್ತಮ ಲಾಭ ಕಾಣಲಿವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಶೇ 60ರಷ್ಟು ಕೃಷಿ ಸಾಲಕ್ಕೆ ಶೇ 4ರಷ್ಟು ಬಡ್ಡಿ ರಿಯಾಯಿತಿ ಲಭಿಸುತ್ತಿದೆ. ಉಳಿದ ಶೇ 40ರಷ್ಟು ಕೃಷಿ ಸಾಲ ಮಾತ್ರ ಶೇ 7ರಷ್ಟು ಬಡ್ಡಿ ದರದಲ್ಲಿ ವಿತರಣೆಯಾಗುತ್ತಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.