ಭಾನುವಾರ, ಮಾರ್ಚ್ 7, 2021
32 °C
ವಿಶ್ವ ಆರ್ಥಿಕ ವೇದಿಕೆಯಲ್ಲಿ ಐಸಿಐಸಿಐ ಬ್ಯಾಂಕ್‌ ಮುಖ್ಯಸ್ಥೆ ಕೊಚ್ಚಾರ್‌

ಎನ್‌ಪಿಎ ನಿಯಂತ್ರಣಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎನ್‌ಪಿಎ ನಿಯಂತ್ರಣಕ್ಕೆ ಕ್ರಮ

ದಾವೋಸ್‌ (ಪಿಟಿಐ): ‘ವಸೂಲಿ ಯಾಗದ ಸಾಲದ ಪ್ರಮಾಣ (ಎನ್‌ಪಿಎ)  ಗರಿಷ್ಠ ಮಟ್ಟದಲ್ಲಿರುವುದರಿಂದ ಹಲವು ಬ್ಯಾಂಕ್‌ಗಳ ಪ್ರಗತಿಗೆ ಹಿನ್ನಡೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಐಸಿಐಸಿಐ ಬ್ಯಾಂಕ್‌ ಕಾರ್ಪೊರೇಟ್‌ ವಲಯದಲ್ಲಿರುವ ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ’ ಎಂದು ಐಸಿಐಸಿಐ ಬ್ಯಾಂಕ್‌ ಮುಖ್ಯಸ್ಥೆ ಚಂದಾ ಕೊಚ್ಚಾರ್‌ ತಿಳಿಸಿದರು.ಎನ್‌ಪಿಎ ತಗ್ಗಿಸಲು ಬ್ಯಾಂಕ್‌ಗಳು ಸಕ್ರೀಯವಾಗಿ ಕೆಲಸ ಮಾಡುತ್ತಿವೆ. ಆಸ್ತಿಗಳ ಮಾರಾಟ ಮತ್ತು ಆಡಳಿತ ಮಂಡಳಿಯಲ್ಲಿ ಕೆಲವು ಬದಲಾವಣೆ ಗಳನ್ನೂ ತರಲಾಗುತ್ತಿದೆ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗುತ್ತಿದೆ ಎಂದರು.ಕಂಪೆನಿಗಳು ಸೂಕ್ತ ರೀತಿಯಲ್ಲಿ ಸಹಕರಿಸದೇ ಇದ್ದರೆ ಕಾನೂನಾತ್ಮಕ ಕ್ರಮ  ಜರುಗಿಸಲಾಗುವುದು ಎಂದು ತಿಳಿಸಿದರು.‘ಕಾರ್ಪೊರೇಟ್‌ ಮತ್ತು ಭಾರಿ ಶ್ರೀಮಂತ ಗ್ರಾಹಕರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಅಳವಡಿಸಿ ಕೊಂಡಿದ್ದೇವೆ.  ಅಲ್ಲದೆ, ಚಿಲ್ಲರೆ ವಲಯಕ್ಕೆ ಸಂಬಂಧಿಸಿದ  ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಕಾರ್ಯತಂತ್ರ ರೂಪಿಸಲಾಗಿದೆ’ ಎಂದು ಅವರು ಹೇಳಿದರು.ಬ್ಯಾಂಕ್‌ಗಳ ಸಮಸ್ಯೆ ಬಗೆಹರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನಿರಂತರವಾಗಿ ಸಭೆ ನಡೆಸಿ ಚರ್ಚೆ ನಡೆಸುತ್ತಿದೆ ಎಂದರು.ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಚಿಲ್ಲರೆ ವಲಯ ದಲ್ಲಿ ಆಸ್ತಿ ಗುಣಮಟ್ಟ  ಉತ್ತಮ ವಾಗಿದ್ದು, ಸ್ಥಿರವಾಗಿಯೂ ಇದೆ. ಆದರೆ, ಕಾರ್ಪೊರೇಟ್‌ ವಲಯದಲ್ಲಿ ಹಲವು ಸವಾಲುಗಳಿವೆ. ಯೋಜನೆಗಳ ಮೇಲೆ ವೆಚ್ಚ ಮಾಡಿದ ಮರಳಿ ಹಣ ಮರಳಿ ಪಡೆಯಲು ಸಮಯ ಹಿಡಿಯುತ್ತಿದೆ. ಇದು ಎನ್‌ಪಿಎಗೆ ಕಾರಣವಾಗಿದೆ ಎಂದರು.ಸರ್ಕಾರ, ನಿಯಂತ್ರಣ ಸಂಸ್ಥೆ ಗಳು ಮತ್ತು ಬ್ಯಾಂಕ್‌ಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ  ಸಮಸ್ಯೆಗಳು ಬಗೆಹರಿಯುವ ವಿಶ್ವಾಸವಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.