ಶನಿವಾರ, ಫೆಬ್ರವರಿ 27, 2021
19 °C

ಎನ್‌ಸಿಟಿಸಿ: ಕೇಂದ್ರ ರಾಜ್ಯಗಳ ಮಧ್ಯೆ ಸಂಘರ್ಷವಿಲ್ಲ - ಚಿದಂಬರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎನ್‌ಸಿಟಿಸಿ: ಕೇಂದ್ರ ರಾಜ್ಯಗಳ ಮಧ್ಯೆ ಸಂಘರ್ಷವಿಲ್ಲ - ಚಿದಂಬರಂ

ನವದೆಹಲಿ (ಪಿಟಿಐ): ~ಪ್ರಸ್ತಾವಿತ ರಾಷ್ಟ್ರೀಯ ಭಯೋತ್ಪಾದನಾ ಕೇಂದ್ರ (ಎನ್‌ಸಿಟಿಸಿ) ಜಾರಿ ಕುರಿತಂತೆ ಕೇಂದ್ರ ಹಾಗೂ ರಾಜ್ಯಗಳ ಮಧ್ಯೆ ಯಾವುದೇ ಸಂಘರ್ಷವಿಲ್ಲ. ಭಯೋತ್ಪಾದನೆ ನಿರ್ಮೂಲನೆ ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆಗಳು ಕೂಡಿ ಕಾರ್ಯನಿರ್ವಹಿಸಲಿವೆ~ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಸೋಮವಾರ ಹೇಳಿದರು.ಆಂತರಿಕ ಭದ್ರತೆ ಕುರಿತ ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿದ ಅವರು `2011ರಲ್ಲಿ ಉಗ್ರಗಾಮಿಗಳ 18 ಸಂಘಟನೆಗಳು ಕಾರ್ಯಚಟುವಟಿಕೆ ಸ್ಥಗಿತಗೊಳಿಸಿದ್ದು, 53 ಉಗ್ರರನ್ನು ಬಂಧಿಸಲಾಗಿದೆ. 2012ರಲ್ಲಿ ಮೂರು ತಿಂಗಳ ಅವಧಿಯಲ್ಲಿ ಉಗ್ರಗಾಮಿಗಳ 3 ಸಂಘಟನೆಗಳು ಕಾರ್ಯಚಟುವಟಿಕೆ ತಟಸ್ಥಗೊಳಿಸಿದ್ದು, 11 ಉಗ್ರರನ್ನು ಸೆರೆಹಿಡಿಯಲಾಗಿದೆ ಎಂದರು.ಕೇಂದ್ರ ತನಿಖಾ ದಳ ಹಾಗೂ ರಾಜ್ಯ ಪೊಲೀಸರ ಜಂಟಿ ಪ್ರಯತ್ನದಿಂದಾಗಿ ಬಹುತೇಕ ಪ್ರಕರಣಗಳನ್ನು ಪತ್ತೆಮಾಡಲು ಸಾಧ್ಯವಾಗಿದೆ. ಕಾರ್ಯಾಚರಣೆಯ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯಗಳ ತನಿಖಾಧಿಕಾರಿಗಳ ಮಧ್ಯೆ ಯಾವುದೇ ಬಿಕ್ಕಟ್ಟು ಉಂಟಾಗಿಲ್ಲ ಎಂದು ಅವರು ಹೇಳಿದರು.ಭಯೋತ್ಪಾದನೆ ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯಗಳ ತನಿಖಾಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.ವಿವಾದಾತ್ಮಕ ಎನ್‌ಸಿಟಿಸಿ ಜಾರಿಗೊಳಿಸುವ ಕುರಿತಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತಮಿಳನಾಡು ಮುಖ್ಯಮಂತ್ರಿ ಜಯಲಲಿತಾ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈ ಮಧ್ಯೆ ಎನ್‌ಸಿಟಿಸಿ ಕುರಿತಂತೆ ಮುಖ್ಯಮಂತ್ರಿಗಳ ಜತೆ ಮೇ 5 ರಂದು ಚರ್ಚೆ ನಡೆಸುವುದಾಗಿ ಪ್ರಧಾನಿ ಮನಮೋಹನ್‌ಸಿಂಗ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.