ಶುಕ್ರವಾರ, ನವೆಂಬರ್ 22, 2019
27 °C

ಎನ್‌ಸಿಬಿ ತಂಡಕ್ಕೆ ಮಡಿವಾಳ ಫ್ರೆಂಡ್ಸ್ ಕಪ್

Published:
Updated:

ಕುಮಟಾ: ಇಲ್ಲಿಯ ಮಹಾತ್ಮಾಗಾಂಧಿ ಮೈದಾನದಲ್ಲಿ ಇತ್ತೀಚೆಗೆ ನಡೆದ ಮಡಿವಾಳ ಸಮಾಜದ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಕಾರವಾರದ ಎನ್‌ಸಿಬಿ ತಂಡ ಚಾಂಪಿಯನ್ ಆಗಿ 11,111 ರೂ ನಗದು ಬಹುಮಾನ ಹಾಗೂ ಫಲಕ ಪಡೆದುಕೊಂಡಿತು.ಕುಮಟಾ ಸೂಪರ್ ಬಾಯ್ಸ ತಂಡ ರನ್ನರ್ಸ್‌ ಅಫ್‌ನೊಂದಿಗೆ 7,777 ರೂಪಾಯಿ ನಗದು ಹಾಗೂ ಫಲಕ ಪಡೆದುಕೊಂಡಿತು.ಚಾಂಪಿಯನ್ ತಂಡದ ರೋಶನ್ ಮಡಿವಾಳ ಸರಣಿ ಶ್ರೇಷ್ಠ ಬಹುಮಾನ ಪಡೆದುಕೊಂಡರೆ, ರನ್ನರ್ಸ್‌ ಅಪ್ ತಂಡದ ರಾಜೇಶ ಮಡಿವಾಳ ಉತ್ತಮ ಬ್ಯಾಟ್ಸ್‌ಮನ್ ಬಹುಮಾನಕ್ಕೆ ಪಾತ್ರರಾದರು.  ಚಿತ್ರದುರ್ಗದ  ಬಸವ ಮಾಚದೇವ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಹೊನ್ನಾವರದ ರಾಜೇಶ ಎಸ್. ಮಡಿವಾಳ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಿರಸಿಯ ನಾಗರಾಜ ಮಡಿವಾಳ, ಮುರ್ಡೇಶ್ವರದ ದಯಾನಂದ ಮಡಿವಾಳ, ಕುಮಟಾದ ಮಂಜುನಾಥ ಮಡಿವಾಳ, ಮಡಿವಾಳ ಸಮಾಜದ ಶಿವಾನಂದ ಮಡಿವಾಳ, ನಾಗೇಶ ಮಡಿವಾಳ, ಶಿವರಾಂ ಮಡಿವಾಳ,  ಎನ್.ಟಿ .ಮಡಿವಾಳ, ನಾಗೇಶ ಮಡಿವಾಳ, ನಿವೃತ್ತ ಸೈನಿಕ ಶಂಕರ ಮಡಿವಾಳ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಮಹಿಳೆಯರ ರಂಗೋಲಿ ಸ್ಪರ್ಧೆಯಲ್ಲಿ  ಶೋಭಾ ಮಡಿವಾಳ, ನಿರ್ಮಲಾ ಮಡಿವಾಳ ಹಾಗೂ ಚಂದ್ರಿಕಾ ಮಡಿವಾಳ ಅವರು ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು.8 ವರ್ಷದೊಳಗಿನ ಮಕ್ಕಳಿಗೆ ಏರ್ಪಡಿಸಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಅದಿತಿ ಮಡಿವಾಳ,  ಧನುಷ ಮಡಿವಾಳ ಹಾಗೂ ಅರ್ಚನಾ ಮಡಿವಾಳ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದುಕೊಂಡರು. ಸಮಾಜದ ನಳಿನಿ  ಮಂಜುನಾಥ, ರೂಪಾ ಸುದರ್ಶನ ಹಾಗೂ ರೂಪಾ ರಮೇಶ ದಂಪತಿ ಉತ್ತಮ ಉಡುಗೆ ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲ ಮೂರು ಬಹುಮಾನ ಗಳಿಸಿದರು.

ಪ್ರತಿಕ್ರಿಯಿಸಿ (+)