ಎನ್‌ಸಿಸಿಯಿಂದ ತಂಬಾಕುರಹಿತ ದಿನಾಚರಣೆ

7

ಎನ್‌ಸಿಸಿಯಿಂದ ತಂಬಾಕುರಹಿತ ದಿನಾಚರಣೆ

Published:
Updated:
ಎನ್‌ಸಿಸಿಯಿಂದ ತಂಬಾಕುರಹಿತ ದಿನಾಚರಣೆ

ಬೆಂಗಳೂರು: ಸಾಮಾಜಿಕ ಕಳಕಳಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ಮತ್ತು ಗೋವಾ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ನಿರ್ದೇಶನಾಲಯವು `ವಿಶ್ವ ತಂಬಾಕು ರಹಿತ ದಿನಾಚರಣೆ~ ಯನ್ನು  ಶುಕ್ರವಾರ ನಗರದಲ್ಲಿ ಆಚರಿಸಿತು.ತಂಬಾಕು ತಿನ್ನುವ ಅಭ್ಯಾಸವನ್ನು ತಪ್ಪಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ರೀತಿಯ ಬ್ಯಾನರ್‌ಗಳನ್ನು ಹಿಡಿದು ಮೆರವಣಿಗೆ  ಮತ್ತು ರ‌್ಯಾಲಿಯನ್ನು ನಡೆಸಲಾಯಿತು.ಎನ್‌ಸಿಸಿ ಕೆಡೆಟ್‌ಗಳು ಕಬ್ಬನ್ ಉದ್ಯಾನವನದಲ್ಲಿ ಸಮ್ಮಿಳಿತಗೊಂಡು ತಂಬಾಕು ಪದಾರ್ಥವನ್ನು ಜೀವನದಿಂದ ದೂರವಿಡುವಂತೆ ಪ್ರತಿಜ್ಞೆ ಕೈಗೊಂಡರು.`ನಾವು ಮುಂದಿನ ದಿನಗಳಲ್ಲಿ ತಂಬಾಕು ಸೇವಿಸಬೇಕು ಎಂದು ಅನಿಸಿದಾಗ ಈ ದಿನವನ್ನು ನೆನಪಿಸಿಕೊಳ್ಳುತ್ತೇವೆ~ ಎಂದು ಘೋಷಿಸಿದರು.ಬೇರೆ ಶಾಲಾ ಮತ್ತು ಕಾಲೇಜುಗಳ ಕೆಡೆಟ್‌ಗಳು ಬೀದಿ ನಾಟಕಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ಕಾರ್ಯವನ್ನು ಮಾಡಿದರು. ತಂಬಾಕಿನಿಂದ ಕ್ಯಾನ್ಸರ್, ಹಲ್ಲುಗಳ ಮೇಲೆ ಕಲೆಗಟ್ಟಿ, ಬಾಯಿಯ ದುರ್ವಾಸನೆ ಬರುವುದು ಹೀಗೆ ನಾನಾ ರೀತಿಯ ಕಾಯಿಲೆಗಳಿಂದ ಬಳಲಬೇಕಾದ ದುಷ್ಟರಿಣಾಮಗಳ ಬಗ್ಗೆ ಅರಿವನ್ನು ಮೂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry