ಎನ್ ಸಿಪಿ ಶಾಸಕ, ಆಪ್ತ ಕಾರ್ಯದರ್ಶಿ ಬಂಧನ

7

ಎನ್ ಸಿಪಿ ಶಾಸಕ, ಆಪ್ತ ಕಾರ್ಯದರ್ಶಿ ಬಂಧನ

Published:
Updated:

 ನಾಸಿಕ್ (ಪಿಟಿಐ):ಅತ್ಯಾಚಾರ ಮಾಡಿ ತಲೆಮರೆಸಿಕೊಂಡಿದ್ದ, ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಚೋರದ ಎನ್ ಸಿ ಪಿ ಶಾಸಕ ದಿಲೀಪ್ ವಾಘ್ ಹಾಗೂ ಆತನ ಆಪ್ತ ಕಾರ್ಯದರ್ಶಿ ಮಹೇಶ್ ಮಾಲಿಯನ್ನು ಭಾನುವಾರ ಇಲ್ಲಿನ ಸ್ಥಳೀಯ ಪೊಲೀಸರು ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಆರೋಪಿಗಳನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಮಧ್ಯಾಹ್ನ ನ್ಯಾಯಾಲಯಕ್ಕೆ ಕರೆತರಲಾಯಿತು. ನ್ಯಾಯಾಧೀಶ ಎ.ಎಸ್. ನಾಲ್ಗೆ ಅವರು ಆರೋಪಿಗಳನ್ನು ಮಾರ್ಚ್ 3 ರವರೆಗೆ ಪೊಲೀಸ್ ಬಂಧನಕ್ಕೆ ಆದೇಶಿಸಿದ್ದಾರೆ.

ಕೆಲಸ ಕೊಡಿಸುವ ಆಮಿಷವೊಡ್ಡಿ ಶಾಸಕ ಹಾಗೂ ಆತನ ಆಪ್ತ ಕಾರ್ಯದರ್ಶಿ ಫೆ. 21ರಂದು,  20 ವರ್ಷದ ಯುವತಿಯನ್ನು ನಾಸಿಕ್ ನ ಅತಿಥಿ ಗೃಹಕ್ಕೆ ಕರೆಸಿಕೊಂಡು ಆತ್ಯಾಚಾರವೆಸಗಿ ತಲೆಮರಿಸಿಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry